alex Certify ಕೊರೊನಾದಿಂದ ರಕ್ಷಿಸಿಕೊಳ್ಳಲು ವಿಶಿಷ್ಟ ರೀತಿಯಲ್ಲಿ ಸಿದ್ಧವಾಗಿದೆ ಈ ಕೆಫೆ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೊರೊನಾದಿಂದ ರಕ್ಷಿಸಿಕೊಳ್ಳಲು ವಿಶಿಷ್ಟ ರೀತಿಯಲ್ಲಿ ಸಿದ್ಧವಾಗಿದೆ ಈ ಕೆಫೆ…!

ಕೊರೊನಾ ಕಾರಣದಿಂದಾಗಿ ಬಂದ್ ಆಗಿದ್ದ ಎಲ್ಲ ಚಟುವಟಿಕೆಗಳೂ ನಿಧಾನವಾಗಿ ತೆರೆದುಕೊಳ್ಳುತ್ತಿದೆ. ಇಡೀ ಪ್ರಪಂಚದ ಆದಾಯ ವ್ಯತ್ಯಯವಾಗಿದ್ದು, ಯಾವುದೇ ಚಟುವಟಿಕೆಯ ಭಾಗವಾಗಲು ಜನರಿಗೂ ಆತಂಕ ಇದ್ದೇ ಇದೆ. ಸುರಕ್ಷತೆಗೆ ಆದ್ಯತೆ ಕೊಡುತ್ತಿದ್ದಾರೆ.

ಅದರಲ್ಲೂ ಹೋಟೆಲ್ ಗಳಲ್ಲಿ ಅನಿವಾರ್ಯವಾಗಿ ಊಟ-ತಿಂಡಿ ಮಾಡಬೇಕಾದವರಂತೂ ಶುಚಿ-ರುಚಿಯ ಜೊತೆಗೆ ಸಾಮಾಜಿಕ ಅಂತರ ಎಲ್ಲಿದೆಯೋ ಅಲ್ಲಿಗೆ ಹುಡುಕಿಕೊಂಡು ಹೋಗುತ್ತಿದ್ದಾರೆ.

ಈ ವಿಚಾರದಲ್ಲಿ ನ್ಯೂಯಾರ್ಕ್ ನಲ್ಲಿರುವ ಕೆಫೆ ದು ಸೊಲೀಲ್ ಗ್ರಾಹಕರನ್ನು ಸೆಳೆಯುತ್ತಿದ್ದು, ಸಾಮಾಜಿಕ ಅಂತರದ ಜೊತೆಗೆ ಖಾಸಗಿತನಕ್ಕೂ ಅವಕಾಶ ಮಾಡಿಕೊಟ್ಟಿದೆ.

ಉಪಾಹಾರ ಗೃಹವನ್ನು ಒಳಾಂಗಣದಲ್ಲಿ ಉಸಿರುಗಟ್ಟಿಸುವ ವಾತಾವರಣದಲ್ಲಿ ನಡೆಸುವ ಬದಲು ಹೊರಾಂಗಣದಲ್ಲಿ ಮಾಡಲು ನಿರ್ಧರಿಸಿದ ಮಾಲೀಕ ನಡೇನ್ ಶೆವರ್ಯುಕ್ಸ್, ಹೊರಾಂಗಣದಲ್ಲಿ ಸಾಲಾಗಿ ಪ್ಲಾಸ್ಟಿಕ್ ಗೂಡುಗಳನ್ನು ಸ್ಥಾಪಿಸಿದ್ದಾರೆ.

ಸುಮಾರು 7 ಅಡಿ ಎತ್ತರದ ಈ ಗೂಡುಗಳು ಆಕಾಶ ಬುಗ್ಗೆಯಂತೆ ಕಾಣುತ್ತದೆ. ಇದರೊಳಗೆ ಒಂದು ಟೇಬಲ್, 6 ಕುರ್ಚಿ ಅಳವಡಿಸಬಹುದಾಗಿದ್ದು,‌ ಒಟ್ಟು 12-13 ಪಾಡ್ ಗಳಲ್ಲಿ ಒಮ್ಮೆಗೆ 80 ಅತಿಥಿಗಳು ಉಪಾಹಾರ ಸವಿಯುವ ವ್ಯವಸ್ಥೆ. ಎಲ್ಲವೂ ಪ್ರತ್ಯೇಕವಾಗಿ ಇರುವುದರಿಂದ ಖಾಸಗಿತನಕ್ಕೂ ಧಕ್ಕೆ ಬರುವುದಿಲ್ಲ. ಇನ್ನು ಕೊರೊನಾ ಹಿನ್ನೆಲೆಯಲ್ಲಿ ಅಗತ್ಯ ಕ್ರಮಗಳನ್ನೂ ತೆಗೆದುಕೊಳ್ಳಲಾಗಿದೆ.

https://www.instagram.com/p/CFYMkyoplUl/?utm_source=ig_web_copy_link

https://www.instagram.com/p/CE-gy4zJvuJ/?utm_source=ig_web_copy_link

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...