ಬಿಎಸ್ಎನ್ಎಲ್ ತನ್ನ ಆಯ್ದ ಗ್ರಾಹಕರಿಗೆ ಲೈಫ್ಟೈಮ್ ವ್ಯಾಲಿಡಿಟಿಯ ಸೌಕರ್ಯವನ್ನ ನೀಡುತ್ತಿದೆ. ಈ ಆಫರ್ ಕೇವಲ ಚಾನೆಲ್ ಟಾಪ್ ಅಪ್ ಪ್ರೀಪೇಯ್ಡ್ ಕನೆಕ್ಷನ್ ಹೊಂದಿರುವವರಿಗೆ ಮಾತ್ರ ಸಿಗಲಿದೆ. ಸಿ ಟಾಪ್ ಅಪ್ ಕನೆಕ್ಷನ್ ಅಂದರೆ ಇದು ರಿಟೇಲರ್ಸ್ ಹಾಗೂ ಡೈರೆಕ್ಟ್ ಸೆಲ್ಲಿಂಗ್ ಏಜೆಂಟ್ಗಳಿಗೆ ನೀಡಲಾಗುವ ವಿಶೇಷ ಕನೆಕ್ಷನ್ ಆಗಿದೆ. ಆದರೆ ಈ ಲೈಫ್ಟೈಂ ವ್ಯಾಲಿಡಿಟಿ ಸೌಕರ್ಯ ಪಡೆಯಬೇಕು ಅಂದರೆ ಸಿ ಟಾಪಪ್ ಬಳಕೆದಾರರು ಕೆಲ ನಿಯಮಾವಳಿಗಳನ್ನ ಪಾಲಿಸಬೇಕಾಗುತ್ತೆ.
ಲೈಫ್ಟೈಮ್ ವ್ಯಾಲಿಡಿಟಿಯನ್ನ ಪಡೆಯಬೇಕು ಅಂದರೆ ಸಿ ಟಾಪಪ್ ಗ್ರಾಹಕ 90 ದಿನಗಳ ಅವಧಿಯೊಳಗಾಗಿ ಕನಿಷ್ಟ ಒಂದು ವ್ಯವಹಾರವನ್ನಾದರೂ ನಡೆಸಿರಬೇಕು. ಇಲ್ಲವಾದಲ್ಲಿ ಬಿಎಸ್ಎನ್ಎಲ್ ನಿಮ್ಮ ಕನೆಕ್ಷನ್ ಕಟ್ ಮಾಡಲಿದೆ. ಈ ಹೊಸ ಆಫರ್ ಜನವರಿ 18ರಿಂದ ಜಾರಿಗೆ ಬಂದಿದೆ.
ಕೇರಳ ಟೆಲಿಕಾಂ ನೀಡಿರುವ ಮಾಹಿತಿಯ ಪ್ರಕಾರ ಈಗಾಗಲೇ ನಿಷ್ಕ್ರಿಯಗೊಂಡಿರುವ ಸಿ ಟಾಪಪ್ ಕನೆಕ್ಷನ್ಗಳನ್ನ ರಿಚಾರ್ಜ್ ಮಾಡುವ ಮೂಲಕ ವಾಪಸ್ ಪಡೆಯಬಹುದು. ಆದರೆ ನಿಮ್ಮ ಕನೆಕ್ಷನ್ ಜಿಪಿ 2 ವಿಭಾಗದಲ್ಲಿ ಇದ್ದರೆ ನೀವು ಸಾಮಾನ್ಯ ಪ್ರಿಪೇಯ್ಡ್ ಸಿಮ್ ಮಾಡುವ ರಿಚಾರ್ಜ್ ಪ್ಯಾಕ್ ಇದಕ್ಕೆ ಅನ್ವಯವಾಗೋದಿಲ್ಲ.