alex Certify BSNL​​ನಿಂದ ಆಯ್ದ ಗ್ರಾಹಕರಿಗೆ ಲೈಫ್​ ಟೈಮ್​ ವ್ಯಾಲಿಡಿಟಿ ಸೌಕರ್ಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BSNL​​ನಿಂದ ಆಯ್ದ ಗ್ರಾಹಕರಿಗೆ ಲೈಫ್​ ಟೈಮ್​ ವ್ಯಾಲಿಡಿಟಿ ಸೌಕರ್ಯ

ಬಿಎಸ್​ಎನ್​​ಎಲ್​ ತನ್ನ ಆಯ್ದ ಗ್ರಾಹಕರಿಗೆ ಲೈಫ್​ಟೈಮ್​ ವ್ಯಾಲಿಡಿಟಿಯ ಸೌಕರ್ಯವನ್ನ ನೀಡುತ್ತಿದೆ. ಈ ಆಫರ್​ ಕೇವಲ ಚಾನೆಲ್​​ ಟಾಪ್​ ಅಪ್​ ಪ್ರೀಪೇಯ್ಡ್​ ಕನೆಕ್ಷನ್​ ಹೊಂದಿರುವವರಿಗೆ ಮಾತ್ರ ಸಿಗಲಿದೆ. ಸಿ ಟಾಪ್​ ಅಪ್​ ಕನೆಕ್ಷನ್​ ಅಂದರೆ ಇದು ರಿಟೇಲರ್ಸ್ ಹಾಗೂ ಡೈರೆಕ್ಟ್ ಸೆಲ್ಲಿಂಗ್​ ಏಜೆಂಟ್​​ಗಳಿಗೆ ನೀಡಲಾಗುವ ವಿಶೇಷ ಕನೆಕ್ಷನ್​ ಆಗಿದೆ. ಆದರೆ ಈ ಲೈಫ್​ಟೈಂ ವ್ಯಾಲಿಡಿಟಿ ಸೌಕರ್ಯ ಪಡೆಯಬೇಕು ಅಂದರೆ ಸಿ ಟಾಪಪ್​ ಬಳಕೆದಾರರು ಕೆಲ ನಿಯಮಾವಳಿಗಳನ್ನ ಪಾಲಿಸಬೇಕಾಗುತ್ತೆ.

ಲೈಫ್​ಟೈಮ್​ ವ್ಯಾಲಿಡಿಟಿಯನ್ನ ಪಡೆಯಬೇಕು ಅಂದರೆ ಸಿ ಟಾಪಪ್​ ಗ್ರಾಹಕ 90 ದಿನಗಳ ಅವಧಿಯೊಳಗಾಗಿ ಕನಿಷ್ಟ ಒಂದು ವ್ಯವಹಾರವನ್ನಾದರೂ ನಡೆಸಿರಬೇಕು. ಇಲ್ಲವಾದಲ್ಲಿ ಬಿಎಸ್​ಎನ್​​ಎಲ್​ ನಿಮ್ಮ ಕನೆಕ್ಷನ್​ ಕಟ್ ಮಾಡಲಿದೆ. ಈ ಹೊಸ ಆಫರ್​ ಜನವರಿ 18ರಿಂದ ಜಾರಿಗೆ ಬಂದಿದೆ.

ಕೇರಳ ಟೆಲಿಕಾಂ ನೀಡಿರುವ ಮಾಹಿತಿಯ ಪ್ರಕಾರ ಈಗಾಗಲೇ ನಿಷ್ಕ್ರಿಯಗೊಂಡಿರುವ ಸಿ ಟಾಪಪ್​ ಕನೆಕ್ಷನ್​ಗಳನ್ನ ರಿಚಾರ್ಜ್​ ಮಾಡುವ ಮೂಲಕ ವಾಪಸ್​ ಪಡೆಯಬಹುದು. ಆದರೆ ನಿಮ್ಮ ಕನೆಕ್ಷನ್​ ಜಿಪಿ 2 ವಿಭಾಗದಲ್ಲಿ ಇದ್ದರೆ ನೀವು ಸಾಮಾನ್ಯ ಪ್ರಿಪೇಯ್ಡ್​ ಸಿಮ್ ಮಾಡುವ ರಿಚಾರ್ಜ್​ ಪ್ಯಾಕ್​ ಇದಕ್ಕೆ ಅನ್ವಯವಾಗೋದಿಲ್ಲ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...