ಬಿಎಸ್ಎನ್ಎಲ್ ದೇಶದ ಆಯ್ದ ರಾಜ್ಯಗಳಿಗೆ 365 ರೂಪಾಯಿಗಳ ಪ್ರಿಪೇಯ್ಡ್ ರೀಚಾರ್ಜ್ನ್ನು ಪರಿಚಯಿಸಿದೆ. ಈ ಹೊಸ ಪ್ಲಾನ್ನಲ್ಲಿ ದಿನಕ್ಕೆ 250 ನಿಮಿಷ ಉಚಿತ ಕರೆ, 2 ಜಿಬಿ ದೈನಂದಿನ ಡೇಟಾ ಹಾಗೂ ದಿನಕ್ಕೆ 100 ಉಚಿತ ಎಸ್ಎಂಸ್ ಸೌಕರ್ಯ ನೀಡಲಿದೆ.
ಈ ಪ್ಲಾನ್ಗೆ 365 ದಿನಗಳ ವ್ಯಾಲಿಡಿಟಿ ಇದ್ದರೂ ಸಹ ಈ ಉಚಿತ ಸೌಕರ್ಯಗಳು ಕೇವಲ 60ದಿನಗಳವರೆಗೆ ಮಾತ್ರ ಇರಲಿದೆ. ಇದಾದ ಬಳಿಕ ನೀವು ಪ್ರತ್ಯೇಕ ರಿಚಾರ್ಜ್ ಮಾಡಿಕೊಳ್ಳಬೇಕಾಗುತ್ತೆ.
ಪ್ರಸ್ತುತ ಈ ರಿಚಾರ್ಜ್ ಪ್ಲಾನ್ ಕೇರಳದಲ್ಲಿ ಮಾತ್ರ ಲಭ್ಯವಿದೆ. ಆದರೆ ಇದು ಸದ್ಯದಲ್ಲೇ ಆಂಧ್ರಪ್ರದೇಶ, ಅಸ್ಸಾಂ, ಬಿಹಾರ- ಜಾರ್ಖಂಡ್, ಗುಜರಾತ್, ಹಿಮಾಚಲ ಪ್ರದೇಶ, ಕರ್ನಾಟಕ, ಕೇರಳ, ಕೋಲ್ಕತ್ತಾ – ಪಶ್ಚಿಮ ಬಂಗಾಳ, ಮಹಾರಾಷ್ಟ್ರ, ಮಧ್ಯಪ್ರದೇಶ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಲಭ್ಯವಿರಲಿದೆ.
ಉಚಿತ ಸೌಕರ್ಯಗಳು ಪೂರ್ಣಗೊಂಡ ಬಳಿಕ ಶುಲ್ಕಗಳು ಆರಂಭವಾಗುತ್ತದೆ. 2 ಜಿಬಿ ದೈನಂದಿನ ಮಿತಿ ಮೀರಿದ ಬಳಿಕ ಡೇಟಾ ವೇಗ 80 ಕೆಬಿಪಿಎಸ್ಗೆ ಇಳಿಯಲಿದೆ.