ಜಾವಾ ಬಳಿಕ ಮಹಿಂದ್ರಾ ಮಾಲೀಕತ್ವದ ಕ್ಲಾಸಿಕ್ ಲೆಜೆಂಡ್ಸ್ ಇದೀಗ ಬಿಎಸ್‌ಎ ಮೋಟಾರ್ ಸೈಕಲ್‌ಗಳನ್ನು ಐದು ದಶಕಗಳ ಬಳಿಕ ರಸ್ತೆಗೆ ಇಳಿಸಲು ಸಜ್ಜಾಗಿದೆ.
1861ರಲ್ಲಿ ಗನ್ ಉತ್ಪಾದಕನಾಗಿ ಸ್ಥಾಪಿತವಾದ ಬರ್ಮಿಂಗ್‌ಹ್ಯಾಮ್ ಸ್ಮಾಲ್ ಆರ್ಮ್ (ಬಿಎಸ್‌ಎ) ನಂತರದ ದಶಕಗಳಲ್ಲಿ ಬ್ರಿಟನ್‌ನಲ್ಲಿ ಮೋಟಾರ್ ಸೈಕಲ್‌ಗಳ ಉತ್ಪಾದನೆಗೆ ಇಳಿಯಿತು. 1950ರ ದಶಕದಲ್ಲಿ ಮೋಟಾರ್ ಸೈಕಲ್ ಜಗತ್ತಿನ ಅತಿ ದೊಡ್ಡ ಉತ್ಪಾದಕನಾಗಿ ಉತ್ತುಂಗ ಸಾಧಿಸಿದ್ದ ಬಿಎಸ್‌ಎ 1970ರ ದಶಕದಲ್ಲಿ ದಿವಾಳಿಯಾಗುವ ಮಟ್ಟ ತಲುಪಿತ್ತು. 2016ರಲ್ಲಿ ಬಿಎಸ್‌ಎ ಅನ್ನು ಕ್ಲಾಸಿಕ್ ಲೆಜೆಂಡ್ಸ್ 2016ರಲ್ಲಿ ಖರೀದಿ ಮಾಡಿದ್ದು, ಇದೀಗ ಬಿಎಸ್‌ಎನ ಆಲ್‌ಟೈಮ್ ಕ್ಲಾಸಿಕ್ ಗೋಲ್ಡ್‌ಸ್ಟಾರ್ ನ್ನು ಮರು ಪರಿಚಯಿಸುತ್ತಿದೆ.
ಈ ಗೋಲ್ಡ್ ಸ್ಟಾರ್ ಮೋಟಾರ್ ಸೈಕಲ್‌ಗಳನ್ನು ಬಿಎಸ್‌ಎ, 1938-1963ರ ಅವಧಿಯಲ್ಲಿ ಮಾರಾಟ ಮಾಡುತ್ತಿತ್ತು. ಬೈಕುಗಳ ಇಂಜಿನ್‌ಗಳು 350ಸಿಸಿ-500ಸಿಸಿ ಸಾಮರ್ಥ್ಯದಲ್ಲಿದ್ದವು. ಇದೀಗ ಬಿಎಸ್‌ಎ ಮಾತ್ರವಲ್ಲದೇ ಗೋಲ್ಡ್ ಸ್ಟಾಟ್ ಬೈಕ್ ಸಹ ನವೀಕರಣಗೊಂಡಿದೆ.
ಅಂಚೆ ಇಲಾಖೆಯಲ್ಲಿ ವಿವಿಧ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ
2022 ರ ಬಿಎಸ್‌ಎ ಗೋಲ್ಡ್ ಸ್ಟಾರ್ ಬೈಕ್ ನೋಡಲು ಹಳೆಯ ಮಾಡೆಲ್‌ನಂತೆಯೇ ಕಾಣುತ್ತದೆ. ಆದರೆ ಈ ಬೈಕ್‌ಗೆ ಕೆಲವೊಂದು ಮಾರ್ಪಾಡುಗಳನ್ನು ಮಾಡಲಾಗಿದೆ. ಹೆಡ್‌ಲ್ಯಾಂಪ್, ಇಂಧನದ ಟ್ಯಾಂಕ್ ವಿನ್ಯಾಸ, ದೊಡ್ಡದಾದ ಏರ್‌ಬಕ್ಸ್, ಸಿಂಗಲ್ ಪೀಸ್ ಸ್ಯಾಡಲ್ ಹಾಗೂ ವೈರ್ ಸ್ಪೋಕ್ ರಿಮ್‌ಗಳನ್ನು ಹೊಸ ಗೋಲ್ಡ್ ಸ್ಟಾರ್ ಬೈಕ್ ಹೊಂದಿದೆ. ಇದರ ಜೊತೆಗೆ ಬೈಕ್‌ಗೆ ಅಗಲವಾದ ಹ್ಯಾಂಡಲ್‌ಬಾರ್ ಗಳು, ಲೋಹದ ಫೆಂಡರ್‌ಗಳನ್ನು ಕೊಡುವ ಮೂಲಕ ರೆಟ್ರೋ ಅಪೀಲ್ ಅನ್ನು ಕಾಪಾಡಿಕೊಳ್ಳಲಾಗಿದೆ.
ಕ್ಲಾಸಿಕ್ ವಿನ್ಯಾಸದ ಜೊತೆಗೆ ಬೈಕ್‌ಗೆ ಇಂದಿನ ಕಾಲಮಾನಕ್ಕೆ ತಕ್ಕಂತೆ ಎಲ್‌ಇಡಿ ಹೆಡ್‌ಲ್ಯಾಂಪ್‌ಗಳು ಹಾಗೂ ಟೇಲ್‌ಲ್ಯಾಂಪ್‌ಗಳನ್ನು ನೀಡಲಾಗಿದೆ.
ಗೋಲ್ಡ್ ಸ್ಟಾರ್‌ನ ಲಿಗಾಸಿ ಎಡಿಷನ್ ಕೊಟ್ಟಿರುವ ಬಿಎಸ್‌ಎ, ಶೀನ್ ಸಿಲ್ವರ್ ಬಣ್ಣದಲ್ಲಿ ಕ್ರೋಂ ಫೆಂಡರ್‌ಗಳು, ಕನ್ನಡಿಗಳು, ಲಿವರ್‌ಗಳು ಹಾಗೂ ಇಂಜಿನ್ ಕವರ್‌ಗಳನ್ನು ಕೊಟ್ಟಿದೆ. ಇನ್‌ಸ್ಟ್ರುಮೆಂಟ್ ಕ್ಲಸ್ಟರ್‌ಗೆ ಗ್ಲಾಸ್ ಕಪ್ಪು ಬಣ್ಣದ ಫಿನಿಶಿಂಗ್ ಹೊಂದಿರುವ ಗೋಲ್ಡ್ ಸ್ಟಾರ್, ರೆಟ್ರೋ ವಿನ್ಯಾಸದೊಂದಿಗೆ, ಅವಳಿ ಪಾಡ್ ಇನ್‌ಸ್ಟ್ರುಮೆಂಟ್ ಕ್ಲಸ್ಟರ್ ಹೊಂದಿದ್ದು, ಸ್ಪೀಡೋಮೀಟರ್ ಹಾಗೂ ಟಾಕೋಮೀಟರ್‌ಗಳನ್ನು ಹೊಂದಿವೆ. ಎರಡು ಪಾಡ್‌ಗಲ್ಲಿ ಎಲ್‌ಸಿಡಿ ಡಿಸ್ಪ್ಲೇ ನೀಡಲಾಗಿದೆ.
SHOCKING: ಒಮಿಕ್ರಾನ್ ಭಯಕ್ಕೆ ಹೆಂಡತಿ-ಮಕ್ಕಳನ್ನೇ ಕೊಂದ ವೈದ್ಯ…..!
ಹೊಸ ಗೋಲ್ಡ್ ಸ್ಟಾರ್ ಬೈಕ್‌ಗೆ 652 ಸಿಸಿ ಇಂಜಿನ್ ಇದ್ದು, ಲಿಕ್ವಿಡ್ ಕೂಲ್ಡ್, ಎಇಓಎಚ್‌ಸಿ, ಸಿಂಗಲ್ ಸಿಲಿಂಡರ್ ಇಂಜಿನ್ ಇದ್ದು, 44 ಬಿಎಚ್‌ಪಿ ಬಲ ನೀಡಲಿದ್ದು, 6,000ಆರ್‌ಪಿಎಂನೊಂದಿಗೆ 55ಎನ್‌ಎಂನಷ್ಟು ಟಾರ್ಕ್ ಅನ್ನು 4,000ಆರ್‌ಪಿಎಂನಲ್ಲಿ ಉತ್ಪಾದಿಸಬಲ್ಲದು. ಇದರೊಂದಿಗೆ ಐದು-ಸ್ಪೀಡ್ ಗೇರ್‌ಬಾಕ್ಸ್‌ನೊಂದಿಗೆ ಸ್ಲಿಪ್ ಮತ್ತು ಸಹಾಯಕ ಕ್ಲಚ್ ನೀಡಲಾಗಿದೆ.
ಡ್ಯುಯಲ್ ಕ್ರಾಡಲ್ ಚಾಸಿಯೊಂದಿಗೆ 41ಎಂಎಂ ಟೆಲಿಸ್ಕೋಪಿಕ್ ಫೋರ್ಕ್ಗಳನ್ನು ನೀಡಲಾಗಿದ್ದು, ಐದು-ಹಂತದ ಅವಳಿ ಶಾಕ್‌ಗಳು ಮತ್ತು ಸ್ವಿಂಗ್‌ಆರ್ಮ್ ನೀಡಲಾಗಿದೆ. ಇದೇ ವೇಳೆ ಮುಂದಿನ ಚಕ್ರಕ್ಕೆ 320ಎಂಎಂ ಡಿಸ್ಕ್‌ಬ್ರೇಕ್ ಹಾಗೂ ಹಿಂದಿನ ಚಕ್ರಕ್ಕೆ 255ಎಂಎಂ ಡಿಸ್ಕ್‌ಬ್ರೇಕ್ ನೀಡಲಾಗಿದ್ದು, ಡ್ಯುಯಲ್ ಎಬಿಎಸ್ ಒದಗಿಸಲಾಗಿದೆ.
“ಪ್ರಮಾದರಹಿತವಾದ ಕೆಲಸಕ್ಕೆ ಹೆಸರಾದ ಬಿಎಸ್‌ಎ, ಬ್ರಿಟಿಷ್ ಮೋಟರ್‌ಸೈಕಲ್‌ಗಳ ಕಾಲದಲ್ಲಿ ರಾಜನಾಗಿ ಆಳುತ್ತಿತ್ತು. ಮೋಟರ್‌ಸೈಕ್ಲಿಂಗ್ ಜಗತ್ತಿನಲ್ಲಿ ತನ್ನದೇ ಗುರುತು ಸ್ಥಾಪಿಸಿರುವ ಇಂಥ ಲೆಜೆಂಡರಿ ಬ್ರಾಂಡ್‌ನ ಡಿಎನ್‌ಎ ಹೊಂದಿರುವ ಹೊಸ ಮಾಡೆಲ್ ಅನ್ನು ಪರಿಚಯಿಸಲು ನಮಗೆ ಭಾರೀ ಹೆಮ್ಮೆಯಾಗುತ್ತಿದೆ. ಬ್ರಾಂಡ್‌ನ ಇತಿಹಾಸದ ಮುಂದಿನ ಭಾಗದಲ್ಲಿ ಅದ್ಭುತ ಸವಾರಿ ಇರಲಿದೆ,” ಎಂದು ಮಹಿಂದ್ರಾ ತಿಳಿಸಿದೆ.