alex Certify ವಾಹನ ಮಾಲೀಕರಿಗೆ ಮತ್ತೊಂದು ಗುಡ್ ನ್ಯೂಸ್: ಬಿಎಸ್ 4 ವಾಹನಗಳ ನೋಂದಣಿಗೆ ಮತ್ತೆ ಅವಕಾಶ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಾಹನ ಮಾಲೀಕರಿಗೆ ಮತ್ತೊಂದು ಗುಡ್ ನ್ಯೂಸ್: ಬಿಎಸ್ 4 ವಾಹನಗಳ ನೋಂದಣಿಗೆ ಮತ್ತೆ ಅವಕಾಶ

ಬೆಂಗಳೂರು: ಭಾರತ್ ಸ್ಟೇಜ್ 4 ವಾಹನಗಳ ನೋಂದಣಿಗೆ 2021 ರ ಜನವರಿ 1 ರಿಂದ 16 ರವರೆಗೆ ಅವಕಾಶ ನೀಡಲಾಗಿದೆ.

ರಾಜ್ಯದಲ್ಲಿ 2020 ರ ಮಾರ್ಚ್ 31 ರೊಳಗೆ ಖರೀದಿಸಿ ನೋಂದಣಿಯಾಗದ ಬಿಎಸ್ 4 ವಾಹನಗಳನ್ನು ಜನವರಿ 1 ರಿಂದ 16 ರವರೆಗೆ ನೋಂದಣಿ ಮಾಡಿಸಿಕೊಳ್ಳಲು ಸಾರಿಗೆ ಇಲಾಖೆ ವತಿಯಿಂದ ಕೊನೆಯ ಅವಕಾಶ ನೀಡಲಾಗಿದೆ.

ಭಾರತದಲ್ಲಿ ಬಿಎಸ್ 4 ವಾಹನಗಳ ನೋಂದಣಿ ಸ್ಥಗಿತವಾಗಿದೆ. ಕೊರೋನಾ ಕಾರಣದಿಂದ ಮಾರ್ಚ್ 31ಕ್ಕೆ ಮೊದಲು ಖರೀದಿಸಿದ ವಾಹನಗಳನ್ನು ನೋಂದಣಿ ಮಾಡಿಸಿಕೊಳ್ಳಲು ಸಾಧ್ಯವಾಗದ ಕಾರಣ ಮತ್ತೊಮ್ಮೆ ಅವಕಾಶ ನೀಡಲಾಗಿದೆ. ವಾಹನ ಪೋರ್ಟಲ್ ನಲ್ಲಿ ವಿವರ ನಮೂದಿಸಿ ನೊಂದಣಿಯಾಗದ ವಾಹನಗಳ ನೋಂದಣಿಗೆ ಸಾರಿಗೆ ಇಲಾಖೆ ಅವಕಾಶ ನೀಡಿದೆ. ನೋಂದಣಿ ಬಾಕಿ ಇರುವ ಬಿಎಸ್ 4 ವಾಹನಗಳ ಮಾಲೀಕರು ಅಗತ್ಯ ದಾಖಲೆಗಳೊಂದಿಗೆ ವಾಹನ ನೋಂದಣಿ ಮಾಡಿಕೊಳ್ಳುವಂತೆ ತಿಳಿಸಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...