alex Certify BIG NEWS: ಬೆಂಗಳೂರು ಬಳಿ ದೇಶದಲ್ಲೇ ಅತಿದೊಡ್ಡ ಐಫೋನ್ ಉತ್ಪಾದನಾ ಘಟಕ: 60,000 ಜನರಿಗೆ ಉದ್ಯೋಗ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಬೆಂಗಳೂರು ಬಳಿ ದೇಶದಲ್ಲೇ ಅತಿದೊಡ್ಡ ಐಫೋನ್ ಉತ್ಪಾದನಾ ಘಟಕ: 60,000 ಜನರಿಗೆ ಉದ್ಯೋಗ

ನವದೆಹಲಿ: ಭಾರತದಲ್ಲಿ ಆಪಲ್ ಐಫೋನ್‌ ಗಳನ್ನು ತಯಾರಿಸುವ ಅತಿದೊಡ್ಡ ಘಟಕ ಬೆಂಗಳೂರಿನ ಹೊಸೂರು ಬಳಿ ನಿರ್ಮಾಣವಾಗಲಿದೆ, ಇದು ಸುಮಾರು 60,000 ಜನರಿಗೆ ಉದ್ಯೋಗ ನೀಡಲಿದೆ ಎಂದು ಟೆಲಿಕಾಂ ಮತ್ತು ಐಟಿ ಸಚಿವ ಅಶ್ವಿನಿ ವೈಷ್ಣವ್ ಹೇಳಿದ್ದಾರೆ.

ಮಂಗಳವಾರ ಜಂಜಾಟಿಯಾ ಗೌರವ್ ದಿವಸ್ ಸಮಾರಂಭದಲ್ಲಿ ಮಾತನಾಡಿದ ವೈಷ್ಣವ್, ರಾಂಚಿ ಮತ್ತು ಹಜಾರಿಬಾಗ್ ಬಳಿ ವಾಸಿಸುವ ಆರು ಸಾವಿರ ಬುಡಕಟ್ಟು ಮಹಿಳೆಯರಿಗೆ ಐಫೋನ್ ತಯಾರಿಸಲು ತರಬೇತಿ ನೀಡಲಾಗಿದೆ ಎಂದು ಹೇಳಿದರು.

Apple’s iPhone ಈಗ ಭಾರತದಲ್ಲಿ ತಯಾರಾಗುತ್ತಿದೆ. ಬೆಂಗಳೂರಿನ ಬಳಿಯ ಹೊಸೂರಿನಲ್ಲಿ ಭಾರತದ ಅತಿದೊಡ್ಡ ಸ್ಥಾವರವನ್ನು ಸ್ಥಾಪಿಸಲಾಗುತ್ತಿದೆ. ಒಂದೇ ಕಾರ್ಖಾನೆಯಲ್ಲಿ 60,000 ಜನರು ಕೆಲಸ ಮಾಡುತ್ತಾರೆ. ಈ 60,000 ಉದ್ಯೋಗಿಗಳಲ್ಲಿ ಮೊದಲ 6,000 ಉದ್ಯೋಗಿಗಳು ರಾಂಚಿ ಮತ್ತು ಹತ್ತಿರದ ಸ್ಥಳಗಳ ನಮ್ಮ ಬುಡಕಟ್ಟು ಸಹೋದರಿಯರು. ಬುಡಕಟ್ಟು ಸಹೋದರಿಯರಿಗೆ ಆಪಲ್ ಐಫೋನ್ ತಯಾರಿಸಲು ತರಬೇತಿ ನೀಡಲಾಗಿದೆ ಎಂದು ಹೇಳಿದರು.

ಹೊಸೂರಿನಲ್ಲಿ ಸ್ಥಾವರವನ್ನು ಹೊಂದಿರುವ ಟಾಟಾ ಎಲೆಕ್ಟ್ರಾನಿಕ್ಸ್‌ ಗೆ ಐಫೋನ್ enclosures ತಯಾರಿಕೆಯನ್ನು ಆಪಲ್ ಹೊರಗುತ್ತಿಗೆ ನೀಡಿದೆ. ಐಫೋನ್‌ ಕಂಪನಿ ಭಾರತದಲ್ಲಿ ಎಲೆಕ್ಟ್ರಾನಿಕ್ಸ್ ದೈತ್ಯರಾದ ಫಾಕ್ಸ್‌ ಕಾನ್, ವಿಸ್ಟ್ರಾನ್ ಮತ್ತು ಪೆಗಾಟ್ರಾನ್ ಸಹಕಾರ ಪಡೆಯಲಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...