
ನವದೆಹಲಿ: ಭಾರತದಲ್ಲಿ ಆಪಲ್ ಐಫೋನ್ ಗಳನ್ನು ತಯಾರಿಸುವ ಅತಿದೊಡ್ಡ ಘಟಕ ಬೆಂಗಳೂರಿನ ಹೊಸೂರು ಬಳಿ ನಿರ್ಮಾಣವಾಗಲಿದೆ, ಇದು ಸುಮಾರು 60,000 ಜನರಿಗೆ ಉದ್ಯೋಗ ನೀಡಲಿದೆ ಎಂದು ಟೆಲಿಕಾಂ ಮತ್ತು ಐಟಿ ಸಚಿವ ಅಶ್ವಿನಿ ವೈಷ್ಣವ್ ಹೇಳಿದ್ದಾರೆ.
ಮಂಗಳವಾರ ಜಂಜಾಟಿಯಾ ಗೌರವ್ ದಿವಸ್ ಸಮಾರಂಭದಲ್ಲಿ ಮಾತನಾಡಿದ ವೈಷ್ಣವ್, ರಾಂಚಿ ಮತ್ತು ಹಜಾರಿಬಾಗ್ ಬಳಿ ವಾಸಿಸುವ ಆರು ಸಾವಿರ ಬುಡಕಟ್ಟು ಮಹಿಳೆಯರಿಗೆ ಐಫೋನ್ ತಯಾರಿಸಲು ತರಬೇತಿ ನೀಡಲಾಗಿದೆ ಎಂದು ಹೇಳಿದರು.
Apple’s iPhone ಈಗ ಭಾರತದಲ್ಲಿ ತಯಾರಾಗುತ್ತಿದೆ. ಬೆಂಗಳೂರಿನ ಬಳಿಯ ಹೊಸೂರಿನಲ್ಲಿ ಭಾರತದ ಅತಿದೊಡ್ಡ ಸ್ಥಾವರವನ್ನು ಸ್ಥಾಪಿಸಲಾಗುತ್ತಿದೆ. ಒಂದೇ ಕಾರ್ಖಾನೆಯಲ್ಲಿ 60,000 ಜನರು ಕೆಲಸ ಮಾಡುತ್ತಾರೆ. ಈ 60,000 ಉದ್ಯೋಗಿಗಳಲ್ಲಿ ಮೊದಲ 6,000 ಉದ್ಯೋಗಿಗಳು ರಾಂಚಿ ಮತ್ತು ಹತ್ತಿರದ ಸ್ಥಳಗಳ ನಮ್ಮ ಬುಡಕಟ್ಟು ಸಹೋದರಿಯರು. ಬುಡಕಟ್ಟು ಸಹೋದರಿಯರಿಗೆ ಆಪಲ್ ಐಫೋನ್ ತಯಾರಿಸಲು ತರಬೇತಿ ನೀಡಲಾಗಿದೆ ಎಂದು ಹೇಳಿದರು.
ಹೊಸೂರಿನಲ್ಲಿ ಸ್ಥಾವರವನ್ನು ಹೊಂದಿರುವ ಟಾಟಾ ಎಲೆಕ್ಟ್ರಾನಿಕ್ಸ್ ಗೆ ಐಫೋನ್ enclosures ತಯಾರಿಕೆಯನ್ನು ಆಪಲ್ ಹೊರಗುತ್ತಿಗೆ ನೀಡಿದೆ. ಐಫೋನ್ ಕಂಪನಿ ಭಾರತದಲ್ಲಿ ಎಲೆಕ್ಟ್ರಾನಿಕ್ಸ್ ದೈತ್ಯರಾದ ಫಾಕ್ಸ್ ಕಾನ್, ವಿಸ್ಟ್ರಾನ್ ಮತ್ತು ಪೆಗಾಟ್ರಾನ್ ಸಹಕಾರ ಪಡೆಯಲಿದೆ.