alex Certify SBI ಗ್ರಾಹಕರಿಗೆ ಬಿಗ್ ಶಾಕ್: ಕ್ರೆಡಿಟ್ ಕಾರ್ಡ್ EMI ಗೆ 99 ರೂ. ಹೆಚ್ಚುವರಿ ಶುಲ್ಕದ ಬರೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

SBI ಗ್ರಾಹಕರಿಗೆ ಬಿಗ್ ಶಾಕ್: ಕ್ರೆಡಿಟ್ ಕಾರ್ಡ್ EMI ಗೆ 99 ರೂ. ಹೆಚ್ಚುವರಿ ಶುಲ್ಕದ ಬರೆ

ನವದೆಹಲಿ: ದೇಶದ ಅತಿ ದೊಡ್ಡ ಬ್ಯಾಂಕ್ ಆಗಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ(SBI) ಗ್ರಾಹಕರಿಗೆ ಮುಖ್ಯ ಮಾಹಿತಿ ಇಲ್ಲಿದೆ.

ಕ್ರೆಡಿಟ್ ಕಾರ್ಡ್ ನಿಂದ ಇಎಂಐ ಮೂಲಕ ಖರೀದಿಗೆ 99 ರೂ. ಮತ್ತು ತೆರಿಗೆಯನ್ನು ಸಂಸ್ಕರಣಾ ಶುಲ್ಕವಾಗಿ ಗ್ರಾಹಕರಿಂದ ಪಡೆಯಲು ಮುಂದಾಗಿದೆ. ಡಿಸೆಂಬರ್ 1 ರಿಂದ ಕ್ರೆಡಿಟ್ ಕಾರ್ಡ್ ನಿಂದ ಇಎಂಐ ಮೂಲಕ ಖರೀದಿಗೆ ಗ್ರಾಹಕರು 99 ರೂ ಮತ್ತು ತೆರಿಗೆ ಪಾವತಿಸಬೇಕಿದೆ. ಇ-ಕಾಮರ್ಸ್ ತಾಣಗಳು, ಶಾಪಿಂಗ್ ಮಳಿಗೆಗಳಲ್ಲಿ ಇಎಂಐ ಮೂಲಕ ಖರೀದಿಗೆ ಇದು ಅನ್ವಯವಾಗಲಿದೆ ಎಂದು ಹೇಳಲಾಗಿದೆ.

ಎಸ್‌ಬಿಐ ಕ್ರೆಡಿಟ್ ಕಾರ್ಡ್ ಬಳಸುತ್ತಿರುವ ಗ್ರಾಹಕರು ಕ್ರೆಡಿಟ್ ಕಾರ್ಡ್‌ಗಳ ಮೂಲಕ ಮಾಡುವ ಎಲ್ಲಾ EMI ವಹಿವಾಟುಗಳಿಗೆ ಸಂಸ್ಕರಣಾ ಶುಲ್ಕ ಮತ್ತು ತೆರಿಗೆಯನ್ನು ವಿಧಿಸಲಾಗುವುದು. SBI ಕಾರ್ಡ್ಸ್ & ಪೇಮೆಂಟ್ ಸರ್ವೀಸಸ್ ಪ್ರೈವೇಟ್ ಲಿಮಿಟೆಡ್(SBICPSL) ತೆರಿಗೆಗಳೊಂದಿಗೆ 99 ರೂಪಾಯಿಗಳ ಸಂಸ್ಕರಣಾ ಶುಲ್ಕವನ್ನು ವಿಧಿಸುವುದಾಗಿ ಹೇಳಿದೆ. ಹೊಸ ಮಾರ್ಗಸೂಚಿಗಳು ಡಿಸೆಂಬರ್ 1, 2021 ರಿಂದ ಅನ್ವಯವಾಗುತ್ತವೆ. ರಿಟೇಲ್ ಔಟ್‌ಲೆಟ್‌ಗಳು ಮತ್ತು ಇ-ಕಾಮರ್ಸ್ ವೆಬ್‌ಸೈಟ್‌ಗಳಲ್ಲಿ ಮಾಡಿದ ಎಲ್ಲಾ ಸಮಾನ ಮಾಸಿಕ ಕಂತುಗಳ(ಇಎಂಐ) ವಹಿವಾಟುಗಳ ಮೇಲೆ ಈ ಪ್ರಕ್ರಿಯೆ ಶುಲ್ಕವನ್ನು ವಿಧಿಸಲಾಗುವುದು.

ಈ ನಿಟ್ಟಿನಲ್ಲಿ ಎಸ್‌ಬಿಐ ನವೆಂಬರ್ 12 ರ ಶುಕ್ರವಾರದಂದು ಎಸ್‌ಬಿಐ ಕ್ರೆಡಿಟ್ ಕಾರ್ಡ್ ಹೊಂದಿರುವವರಿಗೆ ಇ-ಮೇಲ್ ಮೂಲಕ ಅಧಿಸೂಚನೆಯನ್ನು ಕಳುಹಿಸಿದೆ.

EMI ವಹಿವಾಟು ವಿಫಲವಾದರೆ ಅಥವಾ ರದ್ದುಗೊಂಡರೆ ಸಂಸ್ಕರಣಾ ಶುಲ್ಕವನ್ನು ಹಿಂತಿರುಗಿಸಲಾಗುತ್ತದೆ ಎಂದು SBI ಹೇಳಿದೆ. ಎಸ್‌ಬಿಐನ ಹೊಸ ಮಾರ್ಗಸೂಚಿಗಳು ‘ಈಗ ಖರೀದಿಸಿ, ನಂತರ ಪಾವತಿಸಿ’ ಯೋಜನೆಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ ಎನ್ನಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...