ಅಕ್ರಮ ಇ ಟಿಕೆಟ್ಗಳ ಹಾವಳಿಯನ್ನ ತಡೆಗಟ್ಟಲು ಭಾರತೀಯ ರೈಲ್ವೆ ಇಲಾಖೆ ಹಲವಾರು ಮಹತ್ವದ ಕ್ರಮಗಳನ್ನ ಕೈಗೊಂಡಿದೆ. ಕೇಂದ್ರ ಸಚಿವ ಪಿಯೂಷ್ ಗೋಯಲ್ ಲೋಕಸಭೆಯಲ್ಲಿ ಕೇಳಲಾದ ಪ್ರಶ್ನೆಗೆ ಇ ಟಿಕೆಟ್ ಹಾವಳಿ ತಪ್ಪಿಸಲು ರೈಲ್ವೆ ಇಲಾಖೆ ಕೈಗೊಂಡ ಎಲ್ಲಾ ಕ್ರಮಗಳ ಬಗ್ಗೆ ಲಿಖಿತ ರೂಪದಲ್ಲಿ ಮಾಹಿತಿ ಸಲ್ಲಿಸಿದ್ದಾರೆ.
ಇ ಟಿಕೆಟ್ಗಳನ್ನ ಬುಕ್ ಮಾಡುವ ವೇಳೆ ಪ್ರಯಾಣಿಕರು ಪೂರ್ತಿ ಹೆಸರನ್ನ ನೀಡಿದ್ದಾರೋ ಇಲ್ಲವೋ ಅನ್ನೋದನ್ನ ಕನ್ಫರ್ಮ್ ಮಾಡಿಕೊಳ್ಳುವುದು.
ಪ್ರಯಾಣಿಕನ ಪೂರ್ತಿ ಹೆಸರು ಹಾಗೂ ಉಪನಾಮ ಎಲ್ಲೆಲ್ಲಿ ಅವಶ್ಯಕತೆ ಇದೆಯೋ ಅಲ್ಲೆಲ್ಲ ನಮೂದಿಸುವುದು.
ರಿಸರ್ವ್ ಕ್ಲಾಸ್ನಲ್ಲಿ ಪ್ರಯಾಣ ಮಾಡುವ ಪ್ರಯಾಣಿಕರು ಗುರುತಿನ ಚೀಟಿಯನ್ನ ಹೊಂದುವುದು ಕಡ್ಡಾಯವಾಗಿದೆ.
ಪಿಆರ್ಎಸ್ ಕೇಂದ್ರಗಳು, ಬುಕ್ಕಿಂಗ್ ಕೇಂದ್ರಗಳು, ಪ್ಲಾಟ್ ಫಾರಂ ಹಾಗೂ ರೈಲುಗಳಲ್ಲಿ ನಿಯಮಿತ ತಪಾಸಣೆಗಳನ್ನ ನಡೆಸಲಾಗುತ್ತದೆ. ಹಬ್ಬ ಹಾಗೂ ರಜಾದಿನಗಳ ಸಂದರ್ಭದಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚಿರುವ ದಿನಗಳಲ್ಲಿ ಈ ತಪಾಸಣೆ ತೀವ್ರಗೊಳ್ಳಲಿದೆ.
ಆನ್ಲೈನ್ನಲ್ಲಿ ಟಿಕೆಂಟ್ ಬುಕ್ಕಿಂಗ್ ಮಾಡುವ ವೇಳೆ ಗ್ರಾಹಕರಿಗೆ ತಮ್ಮ ಮಾಹಿತಿಗಳನ್ನ ನಮೂದಿಸಲು ಹಾಗೂ ಕ್ಯಾಪ್ಚಾಗಳನ್ನ ಟೈಪ್ ಮಾಡಲು ನಿಗದಿತ ಸಮಯ ನೀಡಲಾಗುತ್ತೆ. 35 ಸೆಕೆಂಡುಗಳ ಮೊದಲು ಯಾವುದೇ ಟಿಕೆಟ್ ಕಾಯ್ದಿರಿಸಲಾಗುವುದಿಲ್ಲ. ಬಳಕೆದಾರರ ಐಡಿಗಳನ್ನು ಪ್ರತಿದಿನವೂ ಪರಿಶೀಲಿಸಲಾಗುತ್ತದೆ ಮತ್ತು ಟಿಕೆಟ್‌ಗಳನ್ನು ವೇಗವಾಗಿ ಕಾಯ್ದಿರಿಸುವಂತಹ ಐಡಿಗಳನ್ನು ನಿಷ್ಕ್ರಿಯಗೊಳಿಸಲಾಗುತ್ತದೆ.
ಐಆರ್ಸಿಟಿಸಿ ಪೋರ್ಟಲ್ನಲ್ಲಿ ಒಬ್ಬ ವ್ಯಕ್ತಿ ಅಥವಾ ಒಂದು ಯೂಸರ್ ಐಡಿಯನ್ನ ಬಳಕೆ ಮಾಡಿ ಒಂದು ತಿಂಗಳಲ್ಲಿ 6 ಟಿಕೆಟ್ಗಳನ್ನ ಬುಕ್ ಮಾಡಲು ಅವಕಾಶ ನೀಡಲಾಗಿದೆ. ಐಆರ್ಸಿಟಿಸಿ ಐಡಿಯ ಜೊತೆಗೆ ಆಧಾರ್ ಕಾರ್ಡ್ ಲಿಂಕ್ ಮಾಡಿದವರು ಹಾಗೂ ರೈಲಿನಲ್ಲಿ ಪ್ರಯಾಣಿಸುವ ಪ್ರಯಾಣಿಕರ ಪೈಕಿ ಒಬ್ಬರ ಆಧಾರ್ ಕಾರ್ಡ್ ಮಾಹಿತಿ ನೀಡಿದ್ದಲ್ಲಿ 12 ಟಿಕೆಟ್ಗಳನ್ನ ಬುಕ್ ಮಾಡಬಹುದು.