ಕೊರೊನಾ, ಲಾಕ್ ಡೌನ್, ಆರ್ಥಿಕ ಮುಗ್ಗಟ್ಟಿನ ಮಧ್ಯೆ ಜನರು ತರಕಾರಿ ಕೊಳ್ಳುವುದು ಈಗ ಕಷ್ಟವಾಗಿದೆ. ತರಕಾರಿ ಬೆಲೆಗಳು ನಿಧಾನವಾಗಿ ಗಗನಕ್ಕೇರ್ತಿವೆ. ರಾಷ್ಟ್ರ ರಾಜಧಾನಿಯಲ್ಲಿ ಒಂದು ಕೆ.ಜಿ. ಟೊಮೊಟೊ ಬೆಲೆ 80-100 ರೂಪಾಯಿ ಗಡಿ ದಾಟ್ತಿದೆ.
ಈ ಋತುವಿನಲ್ಲಿ ಟೊಮೊಟೊ ಹಾಳಾಗುವ ಸಾಧ್ಯತೆ ಹೆಚ್ಚಿದೆ. ಹಾಗಾಗಿ ಟೊಮೊಟೊ ಬೆಲೆ ಗಗನಕ್ಕೇರಿದೆ ಎಂದು ಗ್ರಾಹಕ ವ್ಯವಹಾರಗಳ ಸಚಿವ ರಾಮ್ ವಿಲಾಸ್ ಪಾಸ್ವಾನ್ ಹೇಳಿದ್ದಾರೆ. ಟೊಮೊಟೊ ಬೆಲೆಯಲ್ಲಿ ಏರುಪೇರು ಸಾಮಾನ್ಯ. ಆರ್ಥಿಕ ಸ್ಥಿತಿ ಸುಧಾರಿಸುತ್ತಿದ್ದಂತೆ,ಋ ಬದಲಾದ ಮೇಲೆ ಟೊಮೊಟೊ ಬೆಲೆ ಕೆ.ಜಿ.ಗೆ 20 ರೂಪಾಯಿಗೆ ಇಳಿಯಲಿದೆ ಎಂದು ಅವರು ಭರವಸೆ ನೀಡಿದ್ದಾರೆ.
ಮಳೆಗಾಲದಲ್ಲಿ ಭಾರಿ ಮಳೆಯಿಂದಾಗಿ ಬೆಳೆ ಹಾಳಾಗುತ್ತಿದೆ. ಅದೇ ಸಮಯದಲ್ಲಿ, ಲಾಕ್ ಡೌನ್ ಮತ್ತು ಡೀಸೆಲ್ ಬೆಲೆ ಏರಿಕೆಯಿಂದಾಗಿ ವೆಚ್ಚಗಳು ಹೆಚ್ಚಾಗಿದೆ. ಅದಕ್ಕಾಗಿಯೇ ಟೊಮೆಟೊ ಸೇರಿದಂತೆ ಇತರ ತರಕಾರಿಗಳ ಬೆಲೆ ಹೆಚ್ಚಾಗಿದೆ.