alex Certify BIG NEWS: ಜುಲೈ 1 ರಿಂದ ಬದಲಾಗಲಿದೆ ʼಅಟಲ್ ಪಿಂಚಣಿ ಯೋಜನೆʼಯ ಈ ನಿಯಮ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಜುಲೈ 1 ರಿಂದ ಬದಲಾಗಲಿದೆ ʼಅಟಲ್ ಪಿಂಚಣಿ ಯೋಜನೆʼಯ ಈ ನಿಯಮ

ಕೇಂದ್ರ ಸರ್ಕಾರದ ಪಿಂಚಣಿ ಯೋಜನೆ ಅಟಲ್ ಪಿಂಚಣಿ ಯೋಜನೆಯ ಆಟೋ ಡೆಬಿಟ್‌ ವಿನಾಯಿತಿ ನೀಡುವ ಅವಧಿ ಜೂನ್ 30 ರಂದು ಕೊನೆಗೊಳ್ಳುತ್ತಿದೆ. ಜುಲೈ 1 ರಿಂದ ಈ ಯೋಜನೆಯಲ್ಲಿ ಆಟೋ ಡೆಬಿಟ್ ಮತ್ತೊಮ್ಮೆ ಪ್ರಾರಂಭವಾಗಲಿದೆ

ಏಪ್ರಿಲ್ 11 ರಂದು ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ ಜೂನ್ 30 ರವರೆಗೆ ಎಪಿವೈ ಅಡಿಯಲ್ಲಿ ಆಟೋ ಡೆಬಿಟ್ ನಿಲ್ಲಿಸುವಂತೆ ಬ್ಯಾಂಕುಗಳಿಗೆ ನಿರ್ದೇಶನ ನೀಡಿತ್ತು. ಜುಲೈ 1 ರಿಂದ ಆಟೋ ಡೆಬಿಟ್ ಪ್ರಾರಂಭಿಸಲಾಗುವುದು ಎಂದು ಪಿಎಫ್‌ಆರ್‌ಡಿಎ ಈ ಯೋಜನೆಯ ಚಂದಾದಾರರಿಗೆ ಮೇಲ್ ಮೂಲಕ ಮಾಹಿತಿ ನೀಡುತ್ತಿದೆ.

ಸೆಪ್ಟೆಂಬರ್ 30 ರವರೆಗೆ ಯಾವುದೇ ಪಿಂಚಣಿ ಯೋಜನೆ ಖಾತೆಯನ್ನು ಕ್ರಮಬದ್ಧಗೊಳಿಸದಿದ್ದರೆ ಅದಕ್ಕೆ ಯಾವುದೇ ದಂಡ ವಿಧಿಸಲಾಗುವುದಿಲ್ಲ ಎಂದು ಚಂದಾದಾರರಿಗೆ ಕಳುಹಿಸಿದ ಮೇಲ್ ನಲ್ಲಿ ಪಿಎಫ್ಆರ್ಡಿಎ ತಿಳಿಸಿದೆ.

ಸಾಮಾನ್ಯವಾಗಿ, ಖಾತೆದಾರರು ಈ ಯೋಜನೆಗೆ ತಡವಾಗಿ ಹಣ ಪಾವತಿ ಮಾಡಿದರೆ ದಂಡ ವಿಧಿಸಲಾಗುತ್ತದೆ. ಅಟಲ್ ಪಿಂಚಣಿ ಯೋಜನೆ ಕೇಂದ್ರ ಸರ್ಕಾರದ ಸಾಮಾಜಿಕ ಭದ್ರತಾ ಯೋಜನೆಯಾಗಿದೆ. ಈ ಯೋಜನೆಯಡಿ ಅಸಂಘಟಿತ ವಲಯದಲ್ಲಿ ಕೆಲಸ ಮಾಡುವ ಜನರಿಗೆ ಕೇಂದ್ರ ಸರ್ಕಾರ ತಿಂಗಳಿಗೆ 1000 ರೂಪಾಯಿಗಳಿಂದ 5000 ರೂಪಾಯಿವರೆಗೆ ಪಿಂಚಣಿ ನೀಡುತ್ತದೆ. 18 ರಿಂದ 40 ವರ್ಷ ವಯಸ್ಸಿನ ಯಾರಾದರೂ ಅಟಲ್ ಪಿಂಚಣಿ ಯೋಜನೆ ಖಾತೆಯನ್ನು  ತೆರೆಯಬಹುದು.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...