ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ (ಬಿಇಎಲ್) ಟ್ರೇನಿ ಇಂಜಿನಿಯರ್, ಪ್ರಾಜೆಕ್ಟ್ ಆಫೀಸರ್, ಪ್ರಾಜೆಕ್ಟ ಇಂಜಿನಿಯರ್ ಸೇರಿದಂತೆ ಒಟ್ಟು 549 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಬೆಂಗಳೂರು ಸಂಕೀರ್ಣದಲ್ಲಿ ಕಾಂಟಾಕ್ಟ್ ಆಧಾರದಲ್ಲಿ ಹುದ್ದೆ ನೇಮಕಾತಿ ಪ್ರಕ್ರಿಯೆ ನಡೆಯಲಿದೆ. ಹಾಗೂ ಈ ಹುದ್ದೆ ಅರ್ಜಿ ಸಲ್ಲಿಸಲು ನವೆಂಬರ್ 25 ಕೊನೆಯ ದಿನಾಂಕವಾಗಿದೆ .
ಇಂಜಿನಿಯರ್ ಹುದ್ದೆಯಲ್ಲಿ 2 ವರ್ಷಗಳ ಅನುಭವವಿರುವವರು ಜೊತೆಗೆ 28 ವರ್ಷ ಒಳಗಿನ ಅಭ್ಯರ್ಥಿಗಳು ಪ್ರಾಜೆಕ್ಟ್ ಇಂಜಿನಿಯರ್ ಹುದ್ದೆಗೆ ಅರ್ಜಿ ಸಲ್ಲಿಸಬಹುದಾಗಿದೆ. ಹಾಗೂ 6 ತಿಂಗಳ ಅನುಭವ ಹೊಂದಿರುವವರು ಟ್ರೇನಿ ಇಂಜಿನಿಯರ್ ಹುದ್ದೆಗೆ ಅರ್ಜಿ ಸಲ್ಲಿಸಬಹುದಾಗಿದೆ.
ಈ ಹುದ್ದೆಗೆ ಅರ್ಜಿ ಸಲ್ಲಿಸುವವರು 25 ವರ್ಷದೊಳಗಿನವರಾಗಿರಬೇಕು ಅಂತಾ ಬಿಇಎಲ್ ತಿಳಿಸಿದೆ. ಫೈನಾನ್ಸ್ ವಿಭಾಗದಲ್ಲಿ ಎಂಬಿಎ ಪೂರೈಸಿ 6 ತಿಂಗಳು ಅನುಭವ ಪಡೆದ 25 ವರ್ಷದೊಳಗಿನವರು ಟ್ರೇನಿ ಆಫೀಸರ್ ಹುದ್ದೆಗೆ ಅರ್ಜಿ ಸಲ್ಲಿಸಬಹುದಾಗಿದೆ.