ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಗ್ರಾಹಕರಿಗೆ ಅನೇಕ ಸೌಲಭ್ಯಗಳನ್ನು ನೀಡ್ತಿದೆ. ಈ ಬ್ಯಾಂಕ್ ನಲ್ಲಿ ನಿಮ್ಮ ಸಂಬಳ ಖಾತೆಯಿದ್ದರೆ ನಿಮಗೊಂದು ಮಹತ್ವದ ಸುದ್ದಿಯಿದೆ. ಸಂಬಳ ಖಾತೆ ತೆರೆಯುವ ಗ್ರಾಹಕರಿಗೆ ಬ್ಯಾಂಕ್ ವಿಶೇಷ ಸೌಲಭ್ಯಗಳನ್ನು ನೀಡ್ತಿದೆ.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಅಧಿಕೃತ ವೆಬ್ಸೈಟ್ ಪ್ರಕಾರ, ಬ್ಯಾಂಕ್ ಗೃಹ ಸಾಲಗಳು, ಶಿಕ್ಷಣ ಸಾಲಗಳು, ಕಾರು ಸಾಲಗಳು ಮತ್ತು ವೈಯಕ್ತಿಕ ಸಾಲಗಳ ಮೇಲೆ ರಿಯಾಯಿತಿಯನ್ನು ನೀಡುತ್ತಿದೆ. ಇದಲ್ಲದೆ ಗ್ರಾಹಕರಿಗೆ ಅನೇಕ ರೀತಿಯ ಸೌಲಭ್ಯಗಳನ್ನು ನೀಡಲಾಗುತ್ತದೆ.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಆಕ್ಸಿಡೆಂಟಲ್ ಡೆತ್ ಕವರ್ ನೀಡ್ತಿದೆ. ಸ್ಟೇಟ್ ಬ್ಯಾಂಕ್ನಲ್ಲಿ ಸಂಬಳ ಖಾತೆ ಹೊಂದಿರುವ ಗ್ರಾಹಕರಿಗೆ ಆಕಸ್ಮಿಕ ಡೆತ್ ಕವರ್ 20 ಲಕ್ಷ ರೂಪಾಯಿ ಸಿಗಲಿದೆ. ಗ್ರಾಹಕರು ಅಪಘಾತದಲ್ಲಿ ಸಾವನ್ನಪ್ಪಿದರೆ ಅವರ ಕುಟುಂಬಕ್ಕೆ 20 ಲಕ್ಷ ರೂಪಾಯಿ ನೀಡಲಾಗುತ್ತದೆ.
ಏರ್ ಆಕ್ಸಿಡೆಂಟಲ್ ಡೆತ್ ಕವರ್ : ವಿಮಾನ ಪ್ರಯಾಣದ ವೇಳೆ ಎಸ್ಬಿಐ ಬ್ಯಾಂಕ್ ನಲ್ಲಿ ಸಂಬಳ ಖಾತೆ ಹೊಂದಿರುವ ಗ್ರಾಹಕರು ಸಾವನ್ನಪ್ಪಿದ್ರೆ ಅವರ ಕುಟುಂಬಸ್ಥರಿಗೆ 30 ಲಕ್ಷ ರೂಪಾಯಿ ನೀಡಲಾಗುತ್ತದೆ.
300 ರೂ. ಲಾಭದ ಜೊತೆ 84 ಜಿಬಿಗಿಂತ ಹೆಚ್ಚು ಡೇಟಾ ನೀಡ್ತಿದೆ ಈ ಕಂಪನಿ
ಸಾಲ ಸಂಸ್ಕರಣಾ ಶುಲ್ಕದಲ್ಲಿ ರಿಯಾಯಿತಿ : ಸಂಬಳ ಖಾತೆದಾರರು ಸಾಲ ಸಂಸ್ಕರಣಾ ಶುಲ್ಕದಲ್ಲಿ ಶೇಕಡಾ 50 ವರೆಗೆ ರಿಯಾಯಿತಿ ಪಡೆಯುತ್ತಾರೆ. ವೈಯಕ್ತಿಕ ಸಾಲ, ಗೃಹ ಸಾಲ, ಕಾರು ಸಾಲ ಮುಂತಾದ ಯಾವುದೇ ಸಾಲದ ಸಂಸ್ಕರಣಾ ಶುಲ್ಕದ ಮೇಲೆ ಖಾತೆದಾರ ವಿನಾಯಿತಿ ಪಡೆಯಬಹುದು.
ಓವರ್ಡ್ರಾಫ್ಟ್ ಸೌಲಭ್ಯ – ಬ್ಯಾಂಕಿನ ಪರವಾಗಿ ಓವರ್ಡ್ರಾಫ್ಟ್ ಸೌಲಭ್ಯವೂ ಗ್ರಾಹಕರಿಗೆ ಲಭ್ಯವಿದೆ. ಈ ಸೌಲಭ್ಯದಲ್ಲಿ ಗ್ರಾಹಕರಿಗೆ 2 ತಿಂಗಳ ಸಂಬಳವನ್ನು ಮುಂಚಿತವಾಗಿ ನೀಡಲಾಗುತ್ತದೆ.
ಲಾಕರ್ ಶುಲ್ಕದಲ್ಲಿ ರಿಯಾಯಿತಿ : ಸಂಬಳ ಖಾತೆಯನ್ನು ಹೊಂದಿರುವ ಗ್ರಾಹಕರಿಗೆ ಲಾಕರ್ ಶುಲ್ಕದಲ್ಲಿ ವಿನಾಯಿತಿ ನೀಡುವ ಸೌಲಭ್ಯವೂ ಇದೆ. ಗ್ರಾಹಕರಿಗೆ ಇದರಲ್ಲಿ ಶೇಕಡಾ 25 ರಷ್ಟು ರಿಯಾಯಿತಿ ಸಿಗಲಿದೆ.