alex Certify ಸಾಲದ ಒಂದೇ ಒಂದು ಕಂತನ್ನೂ ಕಟ್ಟದ ಬೀದಿ ಬದಿ ವ್ಯಾಪಾರಿಗಳು..! ಪುರಸಭೆ ಆಯುಕ್ತರಿಗೆ SBI ಪತ್ರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಾಲದ ಒಂದೇ ಒಂದು ಕಂತನ್ನೂ ಕಟ್ಟದ ಬೀದಿ ಬದಿ ವ್ಯಾಪಾರಿಗಳು..! ಪುರಸಭೆ ಆಯುಕ್ತರಿಗೆ SBI ಪತ್ರ

ಕೊರೊನಾ ಹಾಗೂ ಲಾಕ್​ಡೌನ್​ ಸಂಕಷ್ಟದಿಂದಾಗಿ ತೊಂದರೆಗೆ ಸಿಲುಕಿದ ಬೀದಿಬದಿ ವ್ಯಾಪಾರಿಗಳನ್ನ ಉತ್ತೇಜಿಸುವ ಸಲುವಾಗಿ ಸಾಲ ಸೌಲಭ್ಯ ನೀಡುವ ಪಿಎಂ ಆತ್ಮನಿರ್ಭರ್​ ನಿಧಿ ಯೋಜನೆಯಡಿಯಲ್ಲಿ ಪಡೆದ ಅನೇಕ ಸಾಲಗಳು ಎನ್​ಪಿಎಗಳಾಗಿ ಬದಲಾಗುತ್ತಿವೆ ಎಂದು ಬ್ಯಾಂಕ್​ಗಳು ಸ್ಥಳೀಯ ಅಧಿಕಾರಿಗಳಿಗೆ ಮಾಹಿತಿ ನೀಡಿವೆ.

ಸಾಂಕ್ರಾಮಿಕದ ನಡುವೆ ಬೀದಿ ಬದಿ ವ್ಯಾಪಾರಿಗಳಿಗೆ ನೆರವಾಗುವ ಸಲುವಾಗಿ ಜೂನ್​​ನಲ್ಲಿ ಸ್ವಾನಿಧಿ ಯೋಜನೆಯನ್ನ ಕೇಂದ್ರ ಸರ್ಕಾರ ಪರಿಚಯಿಸಿತ್ತು. ಈ ಯೋಜನೆಯಡಿಯಲ್ಲಿ ಬೀದಿ ಬದಿ ವ್ಯಾಪಾರಿಗಳು 10000 ರೂ. ವರೆಗೆ ಸಾಲ ಪಡೆಯಬಹುದು. ಈ ಸಾಲ ಪಡೆದವರು 1 ವರ್ಷದ ಒಳಗೆ ಸಾಲವನ್ನ ಮರುಪಾವತಿ ಮಾಡಬೇಕು. ಈ ಸಾಲವನ್ನ ಪಡೆಯುವ ಸಾಲಗಾರನಿಂದ ಬ್ಯಾಂಕುಗಳು ಯಾವುದೇ ಗ್ಯಾರಂಟಿ ತೆಗೆದುಕೊಳ್ಳೋದಿಲ್ಲ.

ಇಷ್ಟು ಮಾತ್ರವಲ್ಲದೇ ಸರಿಯಾದ ಸಮಯದಲ್ಲಿ ಸಾಲ ಮರುಪಾವತಿ ಮಾಡಿದ ವ್ಯಾಪಾರಿಗೆ ಶೇಕಡಾ 7ರಷ್ಟು ವಾರ್ಷಿಕ ಬಡ್ಡಿಯನ್ನ ಸರ್ಕಾರ ಜಮಾ ಮಾಡುತ್ತೆ. ಈ ಯೋಜನೆಗಾಗಿ ಕೇಂದ್ರ 5 ಸಾವಿರ ಕೋಟಿ ರೂಪಾಯಿ ಮಂಜೂರು ಮಾಡಿದೆ.

ಆದರೆ ಮಧ್ಯಪ್ರದೇಶ ಬುರ್ಹಾರನ್ಪುರದಲ್ಲಿ ಸ್ಟೇಟ್​ ಬ್ಯಾಂಕ್‌ ಆಫ್​ ಇಂಡಿಯಾ ಅಧಿಕಾರಿ ಮುನ್ಸಿಪಲ್​ ಕಮಿಷನರ್​ಗೆ ಪತ್ರ ಬರೆದಿದ್ದು ಅನೇಕ ಸಾಲಗಾರರು ತಮ್ಮ ಸಾಲದ ಒಂದು ಕಂತನ್ನೂ ಕಟ್ಟಿಲ್ಲ ಎಂದು ಹೇಳಿದ್ದಾರೆ. ಬುರ್ಹಾನ್ಪುರದಲ್ಲಿ ಈ ಯೋಜನೆಯ ಅಡಿಯಲ್ಲಿ 160ಕ್ಕೂ ಹೆಚ್ಚು ಮಂದಿ ಸ್ವಾನಿಧಿ ಸಾಲ ಪಡೆದಿದ್ದಾರೆ. ಆದ್ದರಿಂದ ಎನ್​ಪಿಎ ಸಾಲ ಖಾತೆಗಳನ್ನ ರಿಕವರಿ ಮಾಡಲು ನಿಮ್ಮ ಸಹಾಯ ಬೇಕು ಎಂದು ಪುರಸಭೆ ಆಯುಕ್ತರಿಗೆ ಪತ್ರ ಬರೆಯಲಾಗಿದೆ. ಬಡ್ಡಿ ಕಟ್ಟುವ ಅವಧಿ 90 ದಿನಗಳು ಮೀರಿದ್ರೆ ಬ್ಯಾಂಕ್​ ಅಂತಹ ಸಾಲಗಾರರ ಖಾತೆಯನ್ನ ಎನ್​ಪಿಎ ಎಂದು ವರ್ಗೀಕರಿಸುತ್ತೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...