alex Certify BIG NEWS: ಗ್ರಾಹಕರೇ ಗಮನಿಸಿ…! ಬ್ಯಾಂಕುಗಳಿಗೆ ಬರೋಬ್ಬರಿ 7 ದಿನ ರಜೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಗ್ರಾಹಕರೇ ಗಮನಿಸಿ…! ಬ್ಯಾಂಕುಗಳಿಗೆ ಬರೋಬ್ಬರಿ 7 ದಿನ ರಜೆ

ನವದೆಹಲಿ: ಮಾರ್ಚ್ 27 ರಿಂದ ಏಪ್ರಿಲ್ 4 ರ ವರೆಗೆ 9 ದಿನದ ಅವಧಿಯಲ್ಲಿ ಬ್ಯಾಂಕುಗಳಿಗೆ ಬರೋಬ್ಬರಿ 7 ದಿನ ರಜೆ ಇರುತ್ತದೆ. ಹಾಗಾಗಿ ಗ್ರಾಹಕರು ತಮ್ಮ ಯಾವುದೇ ಬ್ಯಾಂಕಿಂಗ್ ವ್ಯವಹಾರಗಳಿಗೆ ಮೊದಲೇ ಪ್ಲಾನ್ ಮಾಡಿಕೊಳ್ಳುವುದು ಒಳ್ಳೆಯದು ಎನ್ನಲಾಗಿದೆ.

ಮಾರ್ಚ್ 27 ರಂದು 4 ನೇ ಶನಿವಾರ, ಮಾರ್ಚ್ 28 ಭಾನುವಾರ ರಜೆ ಇರುತ್ತದೆ. ಹೀಗೆ ವಾರದ ರಜೆ ನಂತರ ಮಾರ್ಚ್ 29 ರಂದು ಸೋಮವಾರ ಹೋಳಿ, ಮಾರ್ಚ್ 31 ರಂದು ಆರ್ಥಿಕ ವರ್ಷ ಮುಕ್ತಾಯದ ದಿನವಾಗಿದೆ. ಏಪ್ರಿಲ್ 1  ಬ್ಯಾಂಕ್ ವಾರ್ಷಿಕ ಖಾತೆ ಸ್ಥಗಿತಗೊಳಿಸಲು ಆಂತರಿಕ ಕಾರ್ಯ, ಏಪ್ರಿಲ್ 2 ಗುಡ್ ಫ್ರೈಡೇ, ಏಪ್ರಿಲ್ 4 ಭಾನುವಾರ ರಜೆ ಇರುತ್ತದೆ.

ಮಾರ್ಚ್ 30 ಮತ್ತು ಏಪ್ರಿಲ್ 3 ರಂದು ಮಾತ್ರ ಬ್ಯಾಂಕುಗಳು ಕಾರ್ಯನಿರ್ವಹಿಸಲಿವೆ. ಹೀಗಾಗಿ ಬ್ಯಾಂಕುಗಳಿಗೆ ಸಾಲು-ಸಾಲು ರಜೆ ಇರುವುದರಿಂದ ಗ್ರಾಹಕರು ಠೇವಣಿ, ವಿತ್ ಡ್ರಾ, ಚೆಕ್ ಕ್ಲಿಯರೆನ್ಸ್, ಲೋನ್ ಸೇರಿದಂತೆ ತಮ್ಮ ಯಾವುದೇ ಬ್ಯಾಂಕಿನ ವ್ಯವಹಾರಗಳ ಬಗ್ಗೆ ಮೊದಲೇ ಪ್ಲಾನ್ ಮಾಡಿಕೊಳ್ಳುವುದು ಒಳ್ಳೆಯದು ಎಂದು ಹೇಳಲಾಗಿದೆ.

ಮಾರ್ಚ್ 27 ರಂದು 4 ನೇ ಶನಿವಾರ

ಮಾರ್ಚ್ 28 ಭಾನುವಾರ

ಮಾರ್ಚ್ 29 ರಂದು ಸೋಮವಾರ ಹೋಳಿ

ಮಾರ್ಚ್ 31 ಬುಧವಾರ ಆರ್ಥಿಕ ವರ್ಷ ಮುಕ್ತಾಯ ದಿನ

ಏಪ್ರಿಲ್ 1  ಬ್ಯಾಂಕ್ ಆರ್ಥಿಕ ವರ್ಷ ಆಂತರಿಕ ಕಾರ್ಯ

ಏಪ್ರಿಲ್ 2 ಗುಡ್ ಫ್ರೈಡೇ

ಏಪ್ರಿಲ್ 4 ಭಾನುವಾರ

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...