alex Certify ಈ ಬ್ಯಾಂಕುಗಳ‌ ಕ್ರೆಡಿಟ್ – ಡೆಬಿಟ್‌ ಕಾರ್ಡ್‌ ಹೊಂದಿದ್ದವರಿಗೊಂದು ಮಹತ್ವದ ಮಾಹಿತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈ ಬ್ಯಾಂಕುಗಳ‌ ಕ್ರೆಡಿಟ್ – ಡೆಬಿಟ್‌ ಕಾರ್ಡ್‌ ಹೊಂದಿದ್ದವರಿಗೊಂದು ಮಹತ್ವದ ಮಾಹಿತಿ

ಬ್ಯಾಂಕ್​ ಆಫ್​ ಬರೋಡಾ, ದೇನಾ ಬ್ಯಾಂಕ್​ ಹಾಗೂ ವಿಜಯ ಬ್ಯಾಂಕ್​ನಲ್ಲಿ ಖಾತೆ ಹೊಂದಿದ್ದವರಿಗೆ ಇಲ್ಲೊಂದು ಪ್ರಮುಖ ಮಾಹಿತಿ ಇದೆ. ಈಗಾಗಲೇ ವಿಜಯ ಬ್ಯಾಂಕ್​ ಹಾಗೂ ದೇನಾ ಬ್ಯಾಂಕ್​​ನ 3898 ಶಾಖೆಗಳ ವಿಲೀನಿಕರಣವನ್ನ ಪೂರ್ಣಗೊಳಿಸಲಾಗಿದೆ ಎಂದು ಬ್ಯಾಂಕ್​ ಆಫ್​ ಬರೋಡಾ ಮಾಹಿತಿ ನೀಡಿದೆ.

2020ರ ಡಿಸೆಂಬರ್​ ವೇಳೆಗೆ 1770 ದೇನಾ ಬ್ಯಾಂಕ್​​ ಶಾಖೆಗಳನ್ನ ಹಾಗೂ 2020ರ ಸೆಪ್ಟೆಂಬರ್​ ವೇಳೆಗೆ 2128 ವಿಜಯ ಬ್ಯಾಂಕ್​ ಶಾಖೆಗಳನ್ನ ಬ್ಯಾಂಕ್​ ಆಫ್​ ಬರೋಡಾ ತನ್ನಲ್ಲಿ ವಿಲೀನ ಮಾಡಿಕೊಂಡಿದೆ.

ಕೊರೊನಾ ಸವಾಲುಗಳ ನಡುವೆಯೂ ಬ್ಯಾಂಕ್​ ಆಫ್​ ಬರೋಡಾ ಬ್ಯಾಂಕ್​ಗಳ ಏಕೀಕರಣವನ್ನ ಯಶಸ್ವಿಯಾಗಿ ಪೂರ್ಣಗೊಳಿಸಿದೆ. ನಮ್ಮೆಲ್ಲ ಗ್ರಾಹಕರನ್ನ ಮತ್ತೊಮ್ಮೆ ಸ್ವಾಗತಿಸಲು ನಾವು ಸಜ್ಜಾಗುತ್ತಿದ್ದೇವೆ. ಬ್ಯಾಂಕ್​ ಆಫ್​ ಬರೋಡಾದ ಗ್ರಾಹಕರು ಆದಷ್ಟು ಡಿಜಿಟಲ್​ ಬ್ಯಾಂಕಿಂಗ್​ ಬಳಕೆ ಮಾಡಬೇಕೆಂದು ನಾವು ವಿನಂತಿಸುತ್ತೇವೆ. 5 ಕೋಟಿಗೂ ಹೆಚ್ಚು ಗ್ರಾಹಕರ ಖಾತೆಗಳನ್ನ ಸ್ಥಳಾಂತರಿಸಲಾಗಿದ್ದು ಶಾಖೆಗಳ ಜೊತೆಗೆ ಎಲ್ಲಾ ಎಟಿಎಂ, ಪಿಒಎಸ್​ ಯಂತ್ರಗಳನ್ನ ಯಶಸ್ವಿಯಾಗಿ ಸ್ಥಳಾಂತರಿಸಲಾಗಿದೆ ಎಂದು ಬ್ಯಾಂಕ್​ ಆಫ್​ ಬರೋಡಾ ವ್ಯವಸ್ಥಾಪಕ ನಿರ್ದೇಶಕ ಸಿಇಓ ಸಂಜೀವ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಅಲ್ಲದೇ ಎಲ್ಲಾ ಗ್ರಾಹಕರು ಡಿಜಿಟಲ್​ ಬ್ಯಾಂಕಿಂಗ್​ ನಡೆಸಲು ಅರ್ಹರಾಗಿದ್ದಾರೆ. ಹಾಗೂ ಹಿಂದಿನ ಬ್ಯಾಂಕ್​ಗಳು ಈಗಾಗಲೇ ಗ್ರಾಹಕರಿಗೆ ನೀಡಿರುವ ಡೆಬಿಟ್​ ಹಾಗೂ ಕ್ರೆಡಿಟ್​ ಕಾರ್ಡ್​ಗಳನ್ನ ಅವುಗಳ ನಿಗದಿತ ಅವಧಿ ಮುಗಿಯುವವರೆಗೆ ಬಳಕೆ ಮಾಡಬಹುದಾಗಿದೆ ಎಂದು ಬ್ಯಾಂಕ್​ ಆಫ್​ ಬರೋಡಾ ಮಾಹಿತಿ ನೀಡಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...