alex Certify ಗಮನಿಸಿ…! ನಾಳೆಯಿಂದ 5 ದಿನ ಕಾಲ ಬ್ಯಾಂಕ್ ಬಂದ್, ಹಣಕಾಸು ಸಂಸ್ಥೆಗಳ ಚಟುವಟಿಕೆಯೂ ಸ್ಥಗಿತ –ಬಳ್ಳಾರಿ ಡಿಸಿ ಮಾಹಿತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗಮನಿಸಿ…! ನಾಳೆಯಿಂದ 5 ದಿನ ಕಾಲ ಬ್ಯಾಂಕ್ ಬಂದ್, ಹಣಕಾಸು ಸಂಸ್ಥೆಗಳ ಚಟುವಟಿಕೆಯೂ ಸ್ಥಗಿತ –ಬಳ್ಳಾರಿ ಡಿಸಿ ಮಾಹಿತಿ

ಬಳ್ಳಾರಿ: ಬಳ್ಳಾರಿ ಜಿಲ್ಲೆಯಲ್ಲಿ ಸಂಪೂರ್ಣ ಲಾಕ್‍ಡೌನ್ ಅನ್ನು ಜೂ. 7 ರ ವರೆಗೆ ಮುಂದುವರಿಸಲಾಗಿದ್ದು, ಜೂ. 2 ರಿಂದ ಮೂರು ದಿನಗಳ ಕಾಲ ಬ್ಯಾಂಕ್‍ಗಳು ಹಾಗೂ ಹಣಕಾಸು ವ್ಯವಹಾರ ಹೊಂದಿರುವ ಸಂಸ್ಥೆಗಳ ಚಟುವಟಿಕೆಗಳನ್ನು ಬಂದ್ ಮಾಡಲು ನಿರ್ಧರಿಸಲಾಗಿದೆ.

ಜೂ. 2 ರಿಂದ 3 ದಿನಗಳ ಕಾಲ ಬಂದ್ ಮಾಡಲಾಗವುದು. ಇದರ ಜೊತೆಗೆ ಶನಿವಾರ ಮತ್ತು ಭಾನುವಾರ ಯಥಾರೀತಿ ಬ್ಯಾಂಕ್‍ಗಳು ಬಂದ್ ಇರಲಿವೆ. ಒಟ್ಟಿನಲ್ಲಿ 5 ದಿನಗಳ ಕಾಲ ಬ್ಯಾಂಕ್ ಚಟುವಟಿಕೆಗಳನ್ನು ಬಂದ್ ಮಾಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಪವನಕುಮಾರ ಮಾಲಪಾಟಿ ಅವರು ತಿಳಿಸಿದ್ದಾರೆ.

ಎಲ್ಲ ಎಟಿಎಂಗಳನ್ನು ಪೂರ್ಣಪ್ರಮಾಣದಲ್ಲಿ ಹಣವಿರುವಂತೆ ನೋಡಿಕೊಳ್ಳಲಾಗುತ್ತದೆ. ಜನರು ಅನಗತ್ಯ ಭಯಗೊಂಡು ಬ್ಯಾಂಕ್‍ಗಳ ಮುಂದೆ ಬಂದು ನಿಂತು ವ್ಯವಹಾರ ಮಾಡಬೇಡಿ ಎಂದು ಮನವಿ ಮಾಡಿದರು.

ಇನ್ನೂ ಒಂದು ವಾರ ಕಟ್ಟುನಿಟ್ಟಾಗಿ ಪಾಲಿಸಿದರೆ ಸೊಂಕು ನಿಯಂತ್ರಣಕ್ಕೆ ಬರಲಿದ್ದು, ಜಿಲ್ಲಾ ಉಸ್ತುವಾರಿ ಸಚಿವರ ಸಮ್ಮತಿ ಮೇರೆಗೆ ಈ ನಿರ್ಧಾರಕ್ಕೆ ಬರಲಾಗಿದೆ ಎಂದು ಅವರು ಸ್ಪಷ್ಟಪಡಿಸಿದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...