ಕೋವಿಡ್ ನಿರ್ಬಂಧಗಳ ಕಾರಣದಿಂದ ಉತ್ಪಾದನಾ ವೆಚ್ಚದಲ್ಲಿ ಹೆಚ್ಚಳವಾದ ಕಾರಣ ಆಟೋಮೊಬೈಲ್ ಬೆಲೆಗಳು ತೀವ್ರಗತಿಯಲ್ಲಿ ಏರಿಕೆ ಕಾಣುತ್ತಿವೆ. ಈ ಟ್ರೆಂಡ್ 2022ರಲ್ಲೂ ಮುಂದುವರೆಯಲಿದೆ ಎಂದು ಗ್ರಾಂಡ್ ಥಾರ್ನ್‌ಟನ್ ವರದಿಯಲ್ಲಿ ತಿಳಿಸಲಾಗಿದೆ.
ಕೋವಿಡ್ ನಿರ್ಬಂಧಗಳ ಸಡಿಲಿಕೆಯ ಬೆನ್ನಿಗೇ ಭಾರತದಲ್ಲಿ ಹೊಸ ಹಾಗೂ ಬಳಸಿದ ವಾಹನಗಳ ಬೆಲೆಗಳು ಏರಿಕೆಯಾಗುತ್ತಿವೆ.
“ಬೆಲೆ ಏರಿಕೆಯು ಮುಂದಿನ ವರ್ಷವೂ ಹೀಗೆ ಮುಂದುವರೆಯಲಿದ್ದು, 2023ರವರೆಗೂ ನಿಯಂತ್ರಣಕ್ಕೆ ಬರುವ ಸಾಧ್ಯತೆ ಇಲ್ಲ. ಸೆಮಿ ಕಂಡಕ್ಟರ್ ಅಲಭ್ಯತೆಯಂಥ ಸಮಸ್ಯೆಗಳಿಂದ ಆಟೋ ಉತ್ಪಾದಕರ ಸಮಸ್ಯೆಗಳು ಇನ್ನಷ್ಟು ಹೆಚ್ಚಾಗಿವೆ,” ಎಂದು ವರದಿಯಲ್ಲಿ ತಿಳಿಸಲಾಗಿದೆ.
ಐಷಾರಾಮಿ ಕಾರು ಮಾರಾಟಕ್ಕಿಟ್ಟ ಶಾರುಖ್ ಖಾನ್…!
“ಸೆಮಿಕಂಡಕ್ಟರ್ ಕೊರತೆಯನ್ನು ಗಮನಿಸಿದಾಗ, ದೇಶೀಯವಾಗಿ ಉತ್ಪಾದನೆ ಮಾಡುವುದು ಪ್ರಮುಖ ಪರಿಹಾರವಾಗಬಹುದು. ಸೆಮಿಕಂಡಕ್ಟರ್ ಅಗತ್ಯಗಳಿಗೆ ದೇಶೀ ಉತ್ಪಾದನೆಯನ್ನೇ ಮೆಚ್ಚಿಕೊಳ್ಳಲು ಇಲ್ಲಿಯೇ ಚಿಪ್‌ಗಳ ಉತ್ಪಾದನೆಯಾಗುವವರೆಗೂ ಕಾಯಬೇಕಾಗುತ್ತದೆ,” ಎಂದು ವರದಿ ತಿಳಿಸುತ್ತಿದೆ.
ದೇಶೀ ಉತ್ಪಾದನೆಗೆ ಪ್ರೋತ್ಸಾಹ ನೀಡುವ ಸರ್ಕಾರದ ಕ್ರಮಗಳಿಂದಾಗಿ ಆಟೋಮೊಬೈಲ್ ಉತ್ಪಾದನಾ ಕ್ಷೇತ್ರದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ವಿದೇಶೀ ನೇರ ಬಂಡವಾಳ ಹೂಡಿಕೆ ಹರಿದು ಬರುವ ಸಾಧ್ಯತೆ ಇದೆ ಎಂದು ವರದಿಯಲ್ಲಿ ಹೇಳಲಾಗಿದೆ.