ನವದೆಹಲಿ: ಎಟಿಎಂ ವಿತ್ ಡ್ರಾ ಶುಲ್ಕ ಮತ್ತೆ ಹೆಚ್ಚಳ ಮಾಡುವ ಸಾಧ್ಯತೆ ಇದೆ. ಭಾರತದ ಅತಿ ದೊಡ್ಡ ಬ್ಯಾಂಕ್ ಆಗಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಎಟಿಎಂಗಳಲ್ಲಿ ಹಣ ಹಿಂಪಡೆಯಲು ಇರುವ ನಿಯಮಾವಳಿಗಳನ್ನು ಜುಲೈ 1ರಿಂದ ಬದಲಾಗುವ ಸಾಧ್ಯತೆ ಇದೆ.
ಮೊದಲಿನಂರತೆಯೇ ಹಣ ವಿತ್ ಡ್ರಾ ಶುಲ್ಕ ವಿಧಿಸಲಾಗುವುದು. ಕೊರೋನಾ ಸಂಕಷ್ಟದ ಹಿನ್ನೆಲೆಯಲ್ಲಿ ಎಟಿಎಂ ಶುಲ್ಕಗಳಿಗೆ ಮೂರು ತಿಂಗಳು ವಿನಾಯಿತಿ ನೀಡಲಾಗಿದೆ. ಜೂನ್ 30 ರಂದು ಈ ಅವಧಿ ಮುಕ್ತಾಯವಾಗಲಿದ್ದು ಮತ್ತೆ ವಿಸ್ತರಣೆ ಮಾಡದೇ ಎಟಿಎಂ ಬಳಕೆಗೆ ಶುಲ್ಕ ಹಾಕಲಾಗುವುದು ಎಂದು ಹೇಳಲಾಗಿದೆ.
ನಿಗದಿತ ವಿತ್ ಡ್ರಾ ಮಿತಿ ಮೀರಿದ ನಂತರ ಪ್ರತಿ ವ್ಯವಹಾರಕ್ಕೆ ಶುಲ್ಕ ಪಾವತಿಸಬೇಕು. ಎಸ್.ಬಿ.ಐ.ನಲ್ಲಿ ಜುಲೈ 1ರಿಂದ ನಿಯಮ ಬದಲಾದಲ್ಲಿ ಉಳಿದ ಬ್ಯಾಂಕುಗಳಲ್ಲಿ ಇದನ್ನೇ ಅನುಸರಿಸುವ ಸಾಧ್ಯತೆ ಇದೆ ಎನ್ನಲಾಗಿದೆ.