ಮಂಗಳೂರು: ಹೊಸ ಅಡಿಕೆಗೆ ದಾಖಲೆಯ ದರ ಬಂದಿದೆ. ಮಂಗಳೂರು ಚಾಲಿ ಅಡಿಕೆ ದರ ಏರುಗತಿಯಲ್ಲಿ ಸಾಗುತ್ತಿದ್ದು, 450 ರೂ.ಗೆ ಮಾರಾಟವಾಗಿದೆ.
ಕಳೆದ ವರ್ಷದಿಂದಲೂ ಅಡಿಕೆ ದರ ಏರುಗತಿಯಲ್ಲೇ ಸಾಗುತ್ತಿದೆ. ಸಾರ್ವಕಾಲಿಕ ದಾಖಲೆಯ ದರ ಬಂದಿದೆ. ಕೊರೋನಾ ಎರಡನೇ ಅಲೆ ವೇಳೆ ಅಡಿಕೆ ಧಾರಣೆ ಸ್ಥಿರವಾಗಿದ್ದು, ಹಳೆಯ ಅಡಿಕೆಗೆ 510 – 515 ರೂ., ಹೊಸ ಅಡಿಕೆಗೆ 415 ರಿಂದ 420 ರೂಪಾಯಿವರೆಗೆ ದರ ಇತ್ತು.
ಈಗ ಏರುಗತಿಯಲ್ಲಿ ಸಾಗುತ್ತಿದೆ. ಹೊಸ ಅಡಿಕೆ ದರ 450 ರೂ.ಗೆ ಮಾರಾಟವಾಗುತ್ತಿದ್ದು, ಕ್ಯಾಂಪ್ಕೋದಲ್ಲಿ ಸೋಮವಾರ ಹಳೆಯ ಅಡಿಕೆಗೆ 520 ರೂ. ಮತ್ತು ಹೊಸ ಅಡಿಕೆಗೆ 450 ರೂಪಾಯಿ ದರದಲ್ಲಿ ಮಾರಾಟವಾಗಿದೆ. ಖಾಸಗಿ ವ್ಯಾಪಾರಸ್ಥರು 460 ರೂಪಾಯಿವರೆಗೂ ಖರೀದಿಸಿದ್ದಾರೆ ಎಂದು ಹೇಳಲಾಗಿದೆ.
ಅಡಕೆ ಧಾರಣೆ ಇದೇ ರೀತಿ ಏರಿಕೆ ಹಾದಿಯಲ್ಲಿ ಮುಂದುವರೆಯುವ ಸಾಧ್ಯತೆ ಇದ್ದು, ಹೊಸ ಅಡಿಕೆಗೆ ಮತ್ತಷ್ಟು ಬೇಡಿಕೆ ಬರಬಹುದು ಎನ್ನಲಾಗಿದೆ.