ನವದೆಹಲಿ: ಏಪ್ರಿಲ್ 1 ರಿಂದ ಆರ್ಥಿಕ ವರ್ಷ ಆರಂಭವಾಗಿದ್ದು, ಕೆಲವು ನಿಯಮಗಳು ದೈನಂದಿನ ಜೀವನದ ಮೇಲೆ ಪರಿಣಾಮ ಬೀರುತ್ತವೆ.
ಇಂದಿನಿಂದ ಆಂಟಿಬಯಾಟಿಕ್, ನೋವುನಿವಾರಕ ಸೇರಿದಂತೆ 800 ಕ್ಕೂ ಅಧಿಕ ಅಗತ್ಯ ಔಷಧಗಳ ಬೆಲೆ ಶೇಕಡ 10 ಕ್ಕೂ ಹೆಚ್ಚು ಏರಿಕೆಯಾಗಲಿದೆ.
ಪೋಸ್ಟ್ ಆಫೀಸ್ ಅವಧಿ ಠೇವಣಿ ಖಾತೆ, ಹಿರಿಯ ನಾಗರಿಕರ ಉಳಿತಾಯ ಖಾತೆ ಮತ್ತು ಮಾಸಿಕ ಆದಾಯ ಯೋಜನೆಗಳಲ್ಲಿ ಹೂಡಿಕೆ ಮಾಡಲು ಬ್ಯಾಂಕ್ ಖಾತೆಯಲ್ಲಿರುವ ನಿಯಮದಲ್ಲಿ ಬದಲಾವಣೆ ಆಗಲಿದೆ.
ಆದಾಯ ತೆರಿಗೆ ರಿಟರ್ನ್ಸ್ ನಲ್ಲಿನ ಆರಂಭಿಕ ದೋಷ ಸರಿಪಡಿಸಿ ಮರು ಸಲ್ಲಿಕೆಗೆ ಎರಡು ವರ್ಷ ಅವಕಾಶ ಸಿಗಲಿದೆ.
ಆಧಾರ್ ಕಾರ್ಡ್ ಗೆ ಜೋಡಣೆಯಾಗದ ಪಾನ್ ಸಂಖ್ಯೆ ಇಂದಿನಿಂದ ನಿಷ್ಕ್ರಿಯವಾಗಲಿದ್ದು, ಹಣಕಾಸು ವಹಿವಾಟುಗಳಿಗೆ ತೊಂದರೆಯಾಗಲಿದೆ. ಅಲ್ಲದೇ, ದಂಡ ಶುಲ್ಕ ಪಾವತಿಸಬೇಕಿದೆ.
ಕ್ರಿಪ್ತೋಕರೆನ್ಸಿ ಸೇರಿದಂತೆ ಎಲ್ಲ ಮಾದರಿಯ ವರ್ಚುವಲ್ ಡಿಜಿಟಲ್ ಲಾಭಾಂಶದಲ್ಲಿ ಮಾರಾಟ ಮಾಡಿದರೆ ಅದಕ್ಕೆ ಶೇ. 30 ರವರೆಗೆ ಅನ್ವಯವಾಗಲಿದೆ.
ವಾಹನಗಳ ಥರ್ಡ್ ಪಾರ್ಟಿ ವಿಜೇತರ ಏಪ್ರಿಲ್ 1 ರಿಂದ ಜಾಸ್ತಿಯಾಗಲಿದೆ.
ಏಪ್ರಿಲ್ 1 ರಿಂದ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಟೋಲ್ ತೆರಿಗೆ ಹೆಚ್ಚಳ ಮಾಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ.
ಹೋಟೆಲ್ ಗಳಲ್ಲಿ ಊಟ, ತಿಂಡಿ ದರಗಳಲ್ಲಿಯೂ ಶೇಕಡ 10 ರಷ್ಟು ಏರಿಕೆ ಮಾಡಲು ಹೋಟೆಲ್ ಮಾಲೀಕರು ಮುಂದಾಗಿದ್ದಾರೆ.
ಬಿಡಿಭಾಗಗಳ ದರ ಏರಿಕೆಯಾದ ಹಿನ್ನೆಲೆಯಲ್ಲಿ ಇಂದಿನಿಂದ ಟೊಯೋಟಾ, ಆಡಿ, ಮರ್ಸಿಡೆಸ್ ಬೆಂಜ್ ಸೇರಿದಂತೆ ಹಲವು ಕಾರುಗಳ ದರ ಹೆಚ್ಚಾಗಲಿದೆ.
ನಿರ್ಮಾಣ ಸಾಮಗ್ರಿ ಬೆಲೆ ಏರಿಕೆಯಾಗಿರುವುದರಿಂದ ಮನೆ ಖರೀದಿ ಕೂಡ ದುಬಾರಿಯಾಗಲಿದೆ.