![](https://kannadadunia.com/wp-content/uploads/2021/08/vehicle-vehicle-s.png)
ನವದೆಹಲಿ: ಹೆಚ್ಚು ಇಂಧನ ಕಾರ್ಯಕ್ರಮತೆಯ ವಾಹನಗಳನ್ನು ಪರಿಚಯಿಸುವುದು ಮತ್ತು ಮಾಲಿನ್ಯ ನಿಯಂತ್ರಣ ಉದ್ದೇಶದಿಂದ ಕೇಂದ್ರ ಸರ್ಕಾರ ಇಂಧನ ದಕ್ಷತೆಯ ಮಾನದಂಡಗಳನ್ನು 2023 ಏಪ್ರಿಲ್ 1 ರಿಂದ ಜಾರಿಗೊಳಿಸಲು ಮುಂದಾಗಿದೆ.
ಮುಂದಿನ ವರ್ಷ ಏಪ್ರಿಲ್ 1 ರಿಂದ ಎಲ್ಲಾ ವಾಹನಗಳಿಗೆ ಇಂಧನ ದಕ್ಷತೆ ಮಾನದಂಡ ಅನ್ವಯವಾಗಲಿದೆ. ಲಘು ವಾಹನ, ಮಧ್ಯಮ ವಾಹನ ಮತ್ತು ಭಾರಿ ವಾಹನಗಳಿಗೆ ಕಡ್ಡಾಯವಾಗಿ ಇಂಧನ ದಕ್ಷತೆ ಮಾನದಂಡಗಳನ್ನು ಜಾರಿಗೊಳಿಸುವ ಪ್ರಸ್ತಾವನೆಯನ್ನು ಸರ್ಕಾರ ಹೊಂದಿದೆ. ಇದನ್ನು ಮುಂದಿನ ವರ್ಷದಿಂದ ಜಾರಿ ಮಾಡಲಾಗುವುದು ಎಂದು ಹೇಳಲಾಗಿದೆ.