ಹೆಚ್ಚುತ್ತಿರುವ ಕೊರೊನಾ ಪ್ರಕರಣಗಳನ್ನ ಗಮನದಲ್ಲಿಟ್ಟುಕೊಂಡು ಆಪಲ್ ಸಂಸ್ಥೆ ಡಿಸೆಂಬರ್ 31, 2021ರವರೆಗೂ ಐಒಎಸ್ ಅಪ್ಲಿಕೇಶನ್ಗಳಲ್ಲಿ ಒದಗಿಸಲಾಗುವ ಆನ್ಲೈನ್ ಕ್ಲಾಸ್ಗಳಿಗೆ ಯಾವುದೇ ಶುಲ್ಕ ವಿಧಿಸೋದಿಲ್ಲ ಎಂದು ಹೇಳಿದೆ.
ಈ ಹಿಂದೆ ಆಪಲ್ ಸಂಸ್ಥೆ ಜೂನ್ 30 ರವರೆಗೆ ಈ ಸೌಲಭ್ಯ ನೀಡಿತ್ತು. ಆದರೆ ಇದೀಗ ಈ ಡೆಡ್ಲೈನ್ ಅವಧಿಯನ್ನ ವರ್ಷಾಂತ್ಯದವರೆಗೂ ಮುಂದುವರಿಸಿದೆ.
ಇಡೀ ವಿಶ್ವ ಕೊರೊನಾ ಸೋಂಕಿನಿಂದ ಚೇತರಿಸಿಕೊಳ್ಳಲು ಶ್ರಮಿಸುತ್ತಿದೆ. ಈ ಕಠಿಣ ಸಂದರ್ಭದಲ್ಲಿ ನಾವು ಗ್ರಾಹಕರಿಗೆ ಡಿಜಿಟಲ್ ಸೌಲಭ್ಯವನ್ನ ಉಚಿತವಾಗಿ ಮುಂದುವರಿಸಲಿದ್ದೇವೆ. ಈ ಹಿಂದೆ ಜೂನ್ವರೆಗೆ ಇದ್ದ ಈ ಡೆಡ್ಲೈನ್ನ್ನು ನಾವು ಡಿಸೆಂಬರ್ 31ರವರೆಗೂ ಮುಂದುವರಿಸಿದ್ದೇವೆ ಎಂದು ಕಂಪನಿ ಹೇಳಿದೆ.