alex Certify ಇನ್ಮುಂದೆ ದೇಹದಲ್ಲಿನ ರಕ್ತದೊತ್ತಡ ಪ್ರಮಾಣವನ್ನೂ ಹೇಳಲಿದೆ ಆಪಲ್​ ವಾಚ್..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಇನ್ಮುಂದೆ ದೇಹದಲ್ಲಿನ ರಕ್ತದೊತ್ತಡ ಪ್ರಮಾಣವನ್ನೂ ಹೇಳಲಿದೆ ಆಪಲ್​ ವಾಚ್..!

ಈಗಾಗಲೇ ದೇಹದಲ್ಲಿರುವ ಆಲ್ಕೋಹಾಲ್​ ಮಟ್ಟ ಹಾಗೂ ಗ್ಲುಕೋಸ್​ ಪ್ರಮಾಣವನ್ನ ಕಂಡುಹಿಡಿಯಬಲ್ಲ ಸೌಲಭ್ಯವುಳ್ಳ ಆಪಲ್​ ವಾಚ್​ಗಳನ್ನ ಮಾರುಕಟ್ಟೆಗೆ ತರೋಕೆ ಮುಂದಾಗಿದ್ದ ಐ ಫೋನ್​​ ಕಂಪನಿ ಈ ವಾಚ್​ನಲ್ಲಿ ರಕ್ತದೊತ್ತಡದ ಪ್ರಮಾಣವನ್ನೂ ಹೇಳುವ ಸಾಧನವನ್ನ ಅಳವಡಿಸಲಿದೆ ಎಂದು ಮೂಲಗಳು ತಿಳಿಸಿವೆ.

ಕ್ಯುಪರ್ಟಿನೋ ಮೂಲದ ಕಂಪನಿ ರಕ್ತದೊತ್ತಡವನ್ನ ತಿಳಿಸುವ ಸೆನ್ಸಾರ್​ಗಳನ್ನ ಆಪಲ್​ ವಾಚ್​ಗಳಲ್ಲಿ ಅಳವಡಿಸಲು ಬ್ರಿಟಿಷ್​ ಎಲೆಕ್ಟ್ರಾನಿಕ್ಸ್​ ಕಂಪನಿಯೊಂದಿಗೆ ಒಪ್ಪಂದ ಮಾಡಿಕೊಂಡಿದೆ. ಆದರೆ ಈ ಹೊಸ ಮಾಡೆಲ್​ ವಾಚ್​ಗಳನ್ನ ಆಪಲ್​ ಕಂಪನಿ ಯಾವಾಗ ಲಾಂಚ್​ ಮಾಡಲಿದೆ ಅನ್ನೋದಕ್ಕೆ ನಿಗದಿತ ದಿನಾಂಕ ಪ್ರಕಟವಾಗಿಲ್ಲ.

ಭವಿಷ್ಯದಲ್ಲಿ ಲಾಂಚ್​ ಆಗಲಿರುವ ಆಪಲ್​ ವಾಚ್​ಗಳಲ್ಲಿ ಗ್ಲುಕೋಸ್​ ಹಾಗೂ ಆಲ್ಕೋಹಾಲ್​ ಮಟ್ಟ ತಿಳಿಸುವ ಸೌಲಭ್ಯ ಇರಲಿದೆ ಎಂದು ಈಗಾಗಲೇ ಹೇಳಿತ್ತು. ಇದೀಗ ರಕ್ತದೊತ್ತಡವನ್ನ ಅಳೆಯುವ ಸೆನ್ಸಾರ್​ನ್ನೂ ವಾಚ್​ಗಳಿಗೆ ಅಳವಡಿಸಲಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...