alex Certify ಆಪಲ್​ ಕಂಪನಿಯ ಹೊಸ ಶ್ರೇಣಿಯ ಏರ್​ಪೋಡ್​ ಬೆಲೆ ಕೇಳಿ ನೆಟ್ಟಿಗರು ಶಾಕ್​ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಆಪಲ್​ ಕಂಪನಿಯ ಹೊಸ ಶ್ರೇಣಿಯ ಏರ್​ಪೋಡ್​ ಬೆಲೆ ಕೇಳಿ ನೆಟ್ಟಿಗರು ಶಾಕ್​

ಟೆಕ್​ ಲೋಕದ ದೈತ್ಯ ಕಂಪನಿ ಆಪಲ್​ ಗುಣಮಟ್ಟದ ಪ್ರಾಡಕ್ಟ್​​ಗಳನ್ನ ಮಾರುಕಟ್ಟೆಗೆ ಪರಚಯಿಸುತ್ತೆ ಅನ್ನೋದ್ರಲ್ಲಿ ಎರಡು ಮಾತಿಲ್ಲ. ಆದರೆ, ಆಪಲ್​ ಪ್ರೊಡಕ್ಟ್​ಗಳ ಬೆಲೆ ಕೇಳಿದ್ರೆ ಮಾತ್ರ ತಲೆ ಗಿರ್​ ಅನ್ನೋದು ಪಕ್ಕಾ.
ಆಪಲ್​ ಕಂಪನಿ ಇದೀಗ ತನ್ನ ಹೊಸ ಏರ್​ಪೋಡ್​ಗಳನ್ನ ಮಾರುಕಟ್ಟೆಗೆ ಪರಿಚಯಿಸಿದೆ. . ಈ ಏರ್​ ಪೋಡ್​ಗಳು ನಾಯ್ಸ್​ ಕ್ಯಾನ್ಸಲೇಶನ್, ಟ್ರಾನ್ಸರೆಸಿ ಮೋಡ್​ ಸೇರಿದಂತೆ ಹಲವಾರು ಆಯ್ಕೆಗಳನ್ನ ಹೊಂದಿವೆ.
ಆದರೆ, ಈ ಏರ್​ಪೋಡ್​ಗಳ ಬೆಲೆ ಬರೋಬ್ಬರಿ 59,900 ರೂಪಾಯಿಗಳು ಅಂದರೆ ನೀವು ನಂಬಲೇಬೇಕು. ಆಪಲ್​ ತನ್ನ ಹೊಸ ಶ್ರೇಣಿಯ ಏರ್​ಪೋಡ್​ಗಳಿಗೆ ನಿಗದಿ ಮಾಡಿದ ಬೆಲೆ ಕಂಡು ನೆಟ್ಟಿಗರು ಹೌಹಾರಿದ್ದಾರೆ. ಏರ್​ಪೋಡ್​ನ ಗುಣಮಟ್ಟದ ಬಗ್ಗೆ ಮಾತನಾಡುವುದಕ್ಕಿಂತಲೂ ಅದರ ಬೆಲೆ ಕುರಿತು ನೆಟ್ಟಿಗರು ಹಾಸ್ಯ ಚಟಾಕಿಗಳನ್ನ ಹಾರಿಸುತ್ತಿದ್ದಾರೆ .
ಕೇವಲ ಏರ್​ಪೋಡ್​ ಮಾತ್ರವಲ್ಲದೇ, ಇದನ್ನ ಎಲ್ಲೆಂದರಲ್ಲಿ ಆರಾಮಾಗಿ ತೆಗೆದುಕೊಂಡು ಹೋಗಲು ಆಪಲ್​ ಸಂಸ್ಥೆ ಕವರ್​ನ್ನೂ ನಿರ್ಮಾಣ ಮಾಡಿದೆ. ಆದರೆ, ಈ ಏರ್​ಪೋಡ್​ ಕವರ್​ಗಳು ಥೇಟ್​ ಮಹಿಳೆಯರು ಧರಿಸುವ ಬ್ರಾ ಆಕೃತಿಯನ್ನ ಹೊಂದಿದ್ದು ಸಾಕಷ್ಟು ಟೀಕೆಗೆ ಒಳಗಾಗುತ್ತಿದೆ.

— Pop Crave (@PopCrave) December 8, 2020

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...