![](https://kannadadunia.com/wp-content/uploads/2020/12/AirPods-Max-400x299.jpg)
ಆಪಲ್ ಕಂಪನಿ ಇದೀಗ ತನ್ನ ಹೊಸ ಏರ್ಪೋಡ್ಗಳನ್ನ ಮಾರುಕಟ್ಟೆಗೆ ಪರಿಚಯಿಸಿದೆ. . ಈ ಏರ್ ಪೋಡ್ಗಳು ನಾಯ್ಸ್ ಕ್ಯಾನ್ಸಲೇಶನ್, ಟ್ರಾನ್ಸರೆಸಿ ಮೋಡ್ ಸೇರಿದಂತೆ ಹಲವಾರು ಆಯ್ಕೆಗಳನ್ನ ಹೊಂದಿವೆ.
ಆದರೆ, ಈ ಏರ್ಪೋಡ್ಗಳ ಬೆಲೆ ಬರೋಬ್ಬರಿ 59,900 ರೂಪಾಯಿಗಳು ಅಂದರೆ ನೀವು ನಂಬಲೇಬೇಕು. ಆಪಲ್ ತನ್ನ ಹೊಸ ಶ್ರೇಣಿಯ ಏರ್ಪೋಡ್ಗಳಿಗೆ ನಿಗದಿ ಮಾಡಿದ ಬೆಲೆ ಕಂಡು ನೆಟ್ಟಿಗರು ಹೌಹಾರಿದ್ದಾರೆ. ಏರ್ಪೋಡ್ನ ಗುಣಮಟ್ಟದ ಬಗ್ಗೆ ಮಾತನಾಡುವುದಕ್ಕಿಂತಲೂ ಅದರ ಬೆಲೆ ಕುರಿತು ನೆಟ್ಟಿಗರು ಹಾಸ್ಯ ಚಟಾಕಿಗಳನ್ನ ಹಾರಿಸುತ್ತಿದ್ದಾರೆ .
ಕೇವಲ ಏರ್ಪೋಡ್ ಮಾತ್ರವಲ್ಲದೇ, ಇದನ್ನ ಎಲ್ಲೆಂದರಲ್ಲಿ ಆರಾಮಾಗಿ ತೆಗೆದುಕೊಂಡು ಹೋಗಲು ಆಪಲ್ ಸಂಸ್ಥೆ ಕವರ್ನ್ನೂ ನಿರ್ಮಾಣ ಮಾಡಿದೆ. ಆದರೆ, ಈ ಏರ್ಪೋಡ್ ಕವರ್ಗಳು ಥೇಟ್ ಮಹಿಳೆಯರು ಧರಿಸುವ ಬ್ರಾ ಆಕೃತಿಯನ್ನ ಹೊಂದಿದ್ದು ಸಾಕಷ್ಟು ಟೀಕೆಗೆ ಒಳಗಾಗುತ್ತಿದೆ.