alex Certify ತೆರಿಗೆ ಪಾವತಿಸುವವರಿಗೆ ಗುಡ್‌ ನ್ಯೂಸ್: ‘GST’ ರಿಟರ್ನ್ ಪಾವತಿ ಗಡುವು ವಿಸ್ತರಣೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ತೆರಿಗೆ ಪಾವತಿಸುವವರಿಗೆ ಗುಡ್‌ ನ್ಯೂಸ್: ‘GST’ ರಿಟರ್ನ್ ಪಾವತಿ ಗಡುವು ವಿಸ್ತರಣೆ

ವಾರ್ಷಿಕ ಜಿಎಸ್‌ಟಿ ರಿಟರ್ನ್ ತುಂಬುವವರಿಗೆ ಕೇಂದ್ರ ಸರ್ಕಾರ ನೆಮ್ಮದಿ ಸುದ್ದಿ ನೀಡಿದೆ. 2018-19ರ ಆರ್ಥಿಕ ವರ್ಷಕ್ಕೆ, ವಾರ್ಷಿಕ ಜಿಎಸ್‌ಟಿ ರಿಟರ್ನ್ ಭರ್ತಿ ಮಾಡಲು ಮತ್ತು ಲೆಕ್ಕ ಪರಿಶೋಧನಾ ವರದಿಯನ್ನು ಸಲ್ಲಿಸುವ ಕೊನೆಯ ದಿನಾಂಕವನ್ನು ವಿಸ್ತರಿಸಿದೆ. ಕೊನೆಯ ದಿನಾಂಕವನ್ನು ಅಕ್ಟೋಬರ್ 31ರವರೆಗೆ ವಿಸ್ತರಿಸಲಾಗಿದೆ.

ಕೇಂದ್ರೀಯ ಪರೋಕ್ಷ ತೆರಿಗೆ ಮತ್ತು ಕಸ್ಟಮ್ಸ್ ಮಂಡಳಿ ಬುಧವಾರ ಈ ಬಗ್ಗೆ ಟ್ವೀಟ್ ಮಾಡಿದೆ. ನೀತಿ ಸಂಹಿತೆಯನ್ನು ಗಮನದಲ್ಲಿಟ್ಟುಕೊಂಡು ಚುನಾವಣಾ ಆಯೋಗದಿಂದ ಅನುಮೋದನೆ ಪಡೆದ ನಂತರ, ಕೇಂದ್ರ ಸರ್ಕಾರವು ಜಿಎಸ್‌ಟಿಆರ್ – 9 ಮತ್ತು ಜಿಎಸ್‌ಟಿಆರ್ – 9ಸಿ ಗಡುವನ್ನು ವಿಸ್ತರಿಸಿದೆ. ಈ ಹಿಂದೆ ಸೆಪ್ಟೆಂಬರ್ 30ರವರೆಗೆ ಅವಕಾಶ ನೀಡಲಾಗಿತ್ತು. ಈಗ ಜಿಎಸ್ಟಿ ರಿಟರ್ನ್ ತುಂಬುವವರಿಗೆ ಅಕ್ಟೋಬರ್ 31 ರವರೆಗೆ ಅವಕಾಶ ಸಿಕ್ಕಿದೆ.

ಸರಕು ಮತ್ತು ಸೇವಾ ತೆರಿಗೆ ಅಡಿಯಲ್ಲಿ ನೋಂದಾಯಿಸಲಾದ ತೆರಿಗೆದಾರರು ಜಿಎಸ್‌ಟಿಆರ್ – 9 ಫಾರ್ಮ್ ಅನ್ನು ವಾರ್ಷಿಕ ಆದಾಯವಾಗಿ ಭರ್ತಿ ಮಾಡಬೇಕು. ಇದರಲ್ಲಿ, ವಿವಿಧ ತೆರಿಗೆಗಳ ಅಡಿಯಲ್ಲಿ ಪಡೆದ ಒಟ್ಟು ಪೂರೈಕೆ ಮತ್ತು ಮೊತ್ತದ ಬಗ್ಗೆ ವಿವರವಾದ ಮಾಹಿತಿ ಅಗತ್ಯವಿದೆ. ಆದರೆ, ಜಿಎಸ್ಟಿಆರ್ – 9 ಸಿ ಒಂದು ರೀತಿಯ ಹೇಳಿಕೆ ರೂಪವಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...