
ಲಾಕ್ಡೌನ್ನಿಂದ ಜನತೆಯ ಆರೋಗ್ಯ ಸುಧಾರಿಸೋದು ಅಷ್ಟರಲ್ಲೇ ಇದೆ. ಇದೊಂದು ಸರ್ಕಾರದ ಅತ್ಯಂತ ಕೆಟ್ಟ ಯೋಜನೆ ಎಂದು ವ್ಯಾಖ್ಯಾನಿಸಿದ್ದಾರೆ.
ಕೊರೊನಾ ಕೇಸ್ ಹೆಚ್ಚಳ ಹಿನ್ನೆಲೆ ಮಹಾರಾಷ್ಟ್ರದಲ್ಲಿ ಲಾಕ್ಡೌನ್ ಆದೇಶ ಜಾರಿಗೆ ತಂದ ಬಳಿಕ ಸೋಶಿಯಲ್ ಮೀಡಿಯಾದಲ್ಲಿ ಆಕ್ರೋಶ ಹೊರಹಾಕಿದ ಅನ್ಮೋಲ್, ಕಲಾವಿದರು ನಟನೆಯನ್ನ ಮಾಡಲು ಅವಕಾಶವಿದೆ, ಕ್ರಿಕೆಟಿಗರು ಕರ್ಫ್ಯೂ ಅವಧಿಯಲ್ಲಿಯೂ ತರಬೇತಿಯನ್ನ ಪಡೆಯಬಹುದು. ವೃತ್ತಿಪರ ನಟರು ತಮ್ಮ ಶೂಟಿಂಗ್ಗಳನ್ನ ಮುಂದುವರಿಸಬಹುದು. ವೃತ್ತಿಪರ ಕ್ರಿಕೆಟಿಗ ರಾತ್ರಿ ಹೊತ್ತು ಪಂದ್ಯವಾಡಬಹುದು. ವೃತ್ತಿಪರ ರಾಜಕಾರಣಿ ಜನಜಂಗುಳಿಯ ನಡುವೆಯೇ ರ್ಯಾಲಿ ಮಾಡಬಹುದು. ಆದರೆ ಉದ್ಯಮ ಹಾಗೂ ಕೆಲಸ ನಿಮಗೆ ಅಗತ್ಯ ಸೇವೆ ಎಂದು ಪರಿಗಣಿಸಲು ಆಗೋದಿಲ್ಲ ಅಲ್ಲವೇ ಎಂದು ಟ್ವೀಟಾಯಿಸಿದ್ದಾರೆ. ಅನ್ಮೋಲ್ ರ ಈ ಟ್ವೀಟ್ ಸಿಕ್ಕಾಪಟ್ಟೆ ವೈರಲ್ ಆಗುತ್ತಿದ್ದಂತೆಯೇ ಅನ್ಮೋಲ್ ವಿವರವಾದ ಪೋಸ್ಟ್ನ್ನು ಶೇರ್ ಮಾಡಿದ್ದಾರೆ.
ಲಾಕ್ಡೌನ್ ಅನ್ನೋದು ಮಾನವನ ಇತಿಹಾಸದಲ್ಲೇ ಅತ್ಯಂತ ದೊಡ್ಡ ಪ್ರಮಾಣದಲ್ಲಿ ಸಂಪತ್ತನ್ನ ವರ್ಗಾವಣೆ ಮಾಡುವ ಒಂದು ಕೀ ಆಗಿದೆ. ಆದರೆ ಜನರು ಇದನ್ನ ಅಸಮರ್ಥ ಆಡಳಿತ ಎಂದು ಭಾವಿಸ್ತಾ ಇದ್ದಾರೆ. ಇದರಿಂದ ಸಾಮಾನ್ಯ ಜನರಿಗೆ ನಷ್ಟವಾಗುತ್ತೆ. ಶ್ರೀಮಂತರಿಗೆ ಲಾಭವಾಗುತ್ತೆ ಎಂದು ಹೇಳಲು ಬರೋದಿಲ್ಲ. ಇ ಕಾಮರ್ಸ್ಗೆ ಹೆಚ್ಚಿನ ಒತ್ತು ನೀಡಲಾಗುತ್ತೆ. ರೈತನ ಜಾಗವನ್ನ ಕಾರ್ಪೋರೇಟ್ ಮಾಡಲಾಗ್ತಿದೆ.
ಲಾಕ್ಡೌನ್ಗೂ ಹಾಗೂ ಜನತೆಯ ಆರೋಗ್ಯಕ್ಕೂ ಯಾವುದೇ ರೀತಿಯ ಸಂಬಂಧವಿಲ್ಲ. ಇದು ನಮ್ಮ ಸಮಾಜದ ಆರ್ಥಿಕತೆಯ ಬೆನ್ನೆಲಬನ್ನ ನಾಶ ಮಾಡುತ್ತೆ. ಕಾರ್ಮಿಕರು, ಕೂಲಿ ಕಾರ್ಮಿಕರು, ಸ್ವಯಂ ಉದ್ಯೋಗಿಗಳು, ರೆಸ್ಟಾರೆಂಟ್ಗಳು, ಡಾಬಾಗಳು, ಬಟ್ಟೆ ಅಂಗಡಿ, ಕ್ರೀಡಾ ಸಂಕೀರ್ಣ, ಆಟದ ಮೈದಾನ, ಜಿಮ್ ಎಲ್ಲವನ್ನ ಮುಚ್ಚುವ ಮೂಲಕ ಆರ್ಥಿಕ ಹೊಡೆತದ ಜೊತೆಗೆ ಆರೋಗ್ಯವನ್ನೂ ನಾಶ ಮಾಡುತ್ತದೆ. ಇದು ಮಾತ್ರವಲ್ಲದೇ ಲಾಕ್ಡೌನ್ ಮಕ್ಕಳ ಮಾನಸಿಕ ಆರೋಗ್ಯವನ್ನೂ ನಾಶ ಮಾಡುತ್ತೆ ಅನ್ನೋದನ್ನೂ ಮರೆಯಬೇಡಿ ಎಂದು ಬರೆದಿದ್ದಾರೆ.