alex Certify ಈ ಗ್ರಾಮದ ಜನತೆಗೆ ಅಪರಿಚಿತ ಖಾತೆಯಿಂದ ಹರಿದು ಬಂತು ರಾಶಿ ರಾಶಿ ಹಣ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈ ಗ್ರಾಮದ ಜನತೆಗೆ ಅಪರಿಚಿತ ಖಾತೆಯಿಂದ ಹರಿದು ಬಂತು ರಾಶಿ ರಾಶಿ ಹಣ..!

ವಿಜಯನಗರಂ ಜಿಲ್ಲೆಯ ಸಲೂರು ಮಂಡಲದ ಶಿವರಾಂಪುರಂನ ಕೆಲ ಗ್ರಾಮಸ್ಥರು ಹೊಸ ವರ್ಷಕ್ಕೆ ಭರ್ಜರಿ ಗಿಫ್ಟ್​​ಗಳನ್ನ ಸ್ವೀಕಾರ ಮಾಡೋ ಮೂಲಕ ಸುದ್ದಿಯಾಗಿದ್ದಾರೆ.

ಡಿಸೆಂಬರ್​ 29ರಂದು 13,000 ರೂಪಾಯಿಯಿಂದ ಹಿಡಿದು 15,000 ರೂಪಾಯಿವರೆಗಿನ ಹಣವನ್ನ ಈ ಗ್ರಾಮದ ಸುಮಾರು 200 ಮಂದಿಯ ಖಾತೆಗೆ ಜಮಾ ಮಾಡಲಾಯ್ತು. ಗ್ರಾಮಸ್ಥರು ಕೂಡ ಯಾವುದೇ ದೂರನ್ನ ನೀಡದೇ ಹಣವನ್ನ ಸ್ವೀಕರಿಸಿದ್ದಾರೆ.

ಕೆಲವೊಂದು ಕಡೆಗಳಲ್ಲಂತೂ ಒಂದೇ ಕುಟುಂಬದಲ್ಲಿ ಒಂದಕ್ಕಿಂತ ಹೆಚ್ಚು ಮಂದಿ ಸದಸ್ಯರ ಖಾತೆಗೆ ಹಣ ಜಮಾ ಆಗಿದೆ. ಅಂದಹಾಗೆ ಈ ಹಣ ಯಾವುದೇ ಸರ್ಕಾರಿ ಯೋಜನೆಗೆ ಸಂಬಂಧಿಸಿದ್ದಲ್ಲ. ಕೆಲ ಫಲಾನುಭವಿಗಳು ಎಟಿಎಂನಲ್ಲಿ ಹಣ ತೆಗೆಯಲು ಆರಂಭಿಸಿದ ಬಳಿಕ ಈ ವಿಚಾರ ಬೆಳಕಿಗೆ ಬಂದಿದೆ.

ಇದು ಅಪರಿಚಿತ ಮೂಲದ ಹಣವಾಗಿದ್ದರಿಂದ ಖಾತೆಯಿಂದ ಹಣ ವಾಪಾಸ್ಸಾಗಿ ಬಿಟ್ಟರೆ ಅಂತಾ ಭಯದಿಂದ ಯಾರು ಕೂಡ ಬ್ಯಾಂಕ್​​ ಅಲ್ಲವೇ ಸರ್ಕಾರಿ ಅಧಿಕಾರಿಗಳಿಗೆ ದೂರನ್ನ ನೀಡಿಲ್ಲ.

ಇನ್ನು ಈ ಬಗ್ಗೆ ಮಾತನಾಡಿದ ಸಲೂರು ಮಂಡಲ್​ ಪರಿಷತ್​ ಅಭಿವೃದ್ಧಿ ಅಧಿಕಾರಿ ಪಾರ್ವತಿ, ಗ್ರಾಮ ಪಂಚಾಯತ್​ ಕಾರ್ಯದರ್ಶಿ ಮೂಲಕ ಈ ವಿಚಾರ ನನ್ನ ಗಮನಕ್ಕೆ ಬಂದಿದೆ. ಇದು ಯಾವುದೇ ಸರ್ಕಾರಿ ಯೋಜನೆಯಲ್ಲ. ಬ್ಯಾಂಕ್​ ಅಧಿಕಾರಿಗಳ ಜೊತೆ ಚರ್ಚಿಸಿ ಸತ್ಯವನ್ನ ಕಂಡು ಹಿಡಿಯುತ್ತೇನೆ ಎಂದು ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...