alex Certify ಅಮೆಜಾನ್​ನಲ್ಲಿ ಶೀಘ್ರದಲ್ಲೇ ಸಿಗಲಿದೆ ಮರಾಠಿ ಭಾಷೆಯಲ್ಲಿ ಗ್ರಾಹಕ ಸೇವೆ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಮೆಜಾನ್​ನಲ್ಲಿ ಶೀಘ್ರದಲ್ಲೇ ಸಿಗಲಿದೆ ಮರಾಠಿ ಭಾಷೆಯಲ್ಲಿ ಗ್ರಾಹಕ ಸೇವೆ…!

ಮರಾಠಿ ಭಾಷೆಯನ್ನ ಸಹಾಯವಾಣಿಗೆ ಸೇರಿಸುವಂತೆ ಮರಾಠಿಗರು ನಡೆಸಿದ ಅಭಿಯಾನದ ಬಳಿಕ ಎಚ್ಚೆತ್ತ ಅಮೆಜಾನ್​ ಕಂಪನಿ ಈ ನಿಟ್ಟಿನಲ್ಲಿ ಕೆಲಸ ಮಾಡುತ್ತಿದೆ. ಅಲ್ಲದೇ ಮರಾಠಿ ಶಾಪಿಂಗ್​ ಅನುಭವವನ್ನ ಪ್ರಾರಂಭಿಸುವ ಕೆಲಸವನ್ನ ಈಗಾಗಲೇ ಶುರು ಮಾಡಿದ್ದೇವೆ ಎಂದು ಸಂಸ್ಥೆ ಅಧಿಕೃತವಾಗಿ ಟ್ವೀಟ್​ ಮಾಡಿದೆ. ಮರಾಠಿ ಮಾತ್ರವಲ್ಲದೇ ಗ್ರಾಹಕ ಹಾಗೂ ಮಾರಾಟಗಾರರ ನಡುವಿನ ಸಂಬಂಧವನ್ನ ಇನ್ನಷ್ಟು ಹೆಚ್ಚಿಸಲು ಮತ್ತಷ್ಟು ಭಾಷೆಗಳನ್ನ ಸೇರಿಸೋದಾಗಿ ಇ ಕಾಮರ್ಸ್​ ಹೇಳಿದೆ.‌

ಮರಾಠಿ ಭಾಷೆಯ ಸಪೋರ್ಟ್​ ಶೀಘ್ರದಲ್ಲೇ ಕಾರ್ಯಗತವಾಗಲಿದೆ ಎಂಬುದನ್ನ ತೋರಿಸೋಕೆ ಅಮೆಜಾನ್​ ಟ್ವೀಟ್​ನಲ್ಲಿ ಸ್ಕ್ರೀನ್​ಶಾಟ್​ನ್ನ ಶೇರ್​ ಮಾಡಿದೆ. ಅಮೆಜಾನ್​ನಲ್ಲಿ ಮರಾಠಿ ಭಾಷೆಯಲ್ಲಿ ಗ್ರಾಹಕ ಸೇವೆ ನೀಡುವಂತೆ ರಾಜ್​ ಠಾಕ್ರೆ ನೇತೃತ್ವದ ಮಹಾರಾಷ್ಟ್ರ ನವನಿರ್ಮಾಣ ಸೇನೆ ಅಮೆಜಾನ್​ ಸಿಇಓ ಜೆಫ್​ ಬೆಜೋಸ್​ಗೆ ಮುಕ್ತ ಪತ್ರ ಬರೆದಿತ್ತು. ಮಹಾರಾಷ್ಟ್ರದ ಗ್ರಾಹಕರಿಗೆ ಈ ಸೇವೆಯನ್ನ ನೀಡದೇ ಇದ್ದರೆ ಅಮೆಜಾನ್ ವಿರುದ್ಧ ಆಂದೋಲನ ನಡೆಸೋದಾಗಿ ಎಚ್ಚರಿಕೆಯನ್ನೂ ನೀಡಿತ್ತು.

ಅಮೆಜಾನ್​ ವಿರುದ್ಧ ಕಾನೂನು ಜಗಳಕ್ಕೆ ಇಳಿಯುವ ವಿಚಾರ ನಮ್ಮದಲ್ಲ. ಆದರೆ ಮಾತೃಭಾಷೆಗಾಗಿ ಮಹಾರಾಷ್ಟ್ರದ ಜನತೆ ಯಾವುದೇ ಮಟ್ಟಕ್ಕೆ ಹೋಗಲು ಸಿದ್ಧ ಎಂದು ಸಾಮಾಜಿಕ ಜಾಲತಾಣಗಳಲ್ಲಿ (#NoMarathi_No Amazon) ಅಭಿಯಾನಗಳನ್ನೂ ನಡೆಸಿದ್ದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...