alex Certify ಅಮೆಜಾನ್ ನಲ್ಲಿ ನಕಲಿ ವಿಮರ್ಶೆ ಹಾಕಿ 4 ತಿಂಗಳಲ್ಲಿ 19 ಲಕ್ಷ ರೂ. ಗಳಿಕೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಮೆಜಾನ್ ನಲ್ಲಿ ನಕಲಿ ವಿಮರ್ಶೆ ಹಾಕಿ 4 ತಿಂಗಳಲ್ಲಿ 19 ಲಕ್ಷ ರೂ. ಗಳಿಕೆ

Amazon

ಕೆಲ ಚೀನಾ ಕಂಪನಿಗಳು ಹಣ ನೀಡಿ ನಕಲಿ ವಿಮರ್ಶೆಯನ್ನು ಅಮೆಜಾನ್ ನಲ್ಲಿ ಹಾಕಿ ವಸ್ತುಗಳನ್ನು ಮಾರಾಟ ಮಾಡಿವೆ. ಫೈನಾನ್ಷಿಯಲ್ ಟೈಮ್ಸ್ ವರದಿಯಲ್ಲಿ ಈ ವಿಷಯ ಬಹಿರಂಗವಾಗಿದೆ. ಸುಮಾರು ಮೂರು ತಿಂಗಳಲ್ಲಿ ನಕಲಿ ವಿಮರ್ಶೆ ಮಾಡುವ ಮೂಲಕ ವಿಮರ್ಶಕರು ಕನಿಷ್ಠ 19 ಲಕ್ಷ ರೂಪಾಯಿ ಗಳಿಸಿದ್ದಾರೆ.

ಟಾಪ್ ವಿಮರ್ಶಕರು ಹಣವನ್ನು ತೆಗೆದುಕೊಳ್ಳುವ ಮೂಲಕ ಅಮೆಜಾನ್‌ನಲ್ಲಿ 5 ಸ್ಟಾರ್ ರೇಟಿಂಗ್ ನೀಡುತ್ತಿದ್ದರು. ಮೊದಲು ಅವರು ಉತ್ಪನ್ನವನ್ನು ಖರೀದಿಸುತ್ತಿದ್ದರು ಮತ್ತು ನಂತರ ಅಮೆಜಾನ್‌ನಲ್ಲಿ 5 ಸ್ಟಾರ್ ರೇಟಿಂಗ್ ನೀಡಿದ್ದರು. ನಂತರ ಅವುಗಳನ್ನು ಕಂಪನಿಗಳಿಗೆ ವಾಪಸ್ ನೀಡುವ ಜೊತೆಗೆ ಕೆಲವೊಂದು ಉಡುಗೊರೆಗಳನ್ನು ಪಡೆಯುತ್ತಿದ್ದರು.

ಜಸ್ಟಿನ್ ಫ್ರೈಯರ್ ಎಂಬ ವ್ಯಕ್ತಿ amazon uk ನಲ್ಲಿ ನಂಬರ್ 1 ವಿಮರ್ಶಕ. ಆಗಸ್ಟ್ ನಲ್ಲಿ 14 ಲಕ್ಷ ರೂಪಾಯಿ ಮೌಲ್ಯದ ವಸ್ತುಗಳ ವಿಮರ್ಶೆ ಮಾಡಿದ್ದಾನೆ. ಪ್ರತಿ 4 ಗಂಟೆಗಳಿಗೊಮ್ಮೆ ಹೊಸ ಐಟಂಗೆ 5  ಸ್ಟಾರ್ ನೀಡಿದ್ದಾನೆ. ವರದಿಯ ಪ್ರಕಾರ, ಜಸ್ಟಿನ್ ಅಮೆಜಾನ್‌ನಿಂದ ಖರೀದಿಸಿದ ವಸ್ತುಗಳನ್ನು ಇಬೇಯಲ್ಲಿ ಮಾರಾಟ ಮಾಡಿದ್ದಾನೆ. ಜೂನ್‌ನಿಂದ ಜಸ್ಟಿನ್ 19 ಲಕ್ಷ ರೂಪಾಯಿ ಮೌಲ್ಯದ ಸರಕುಗಳನ್ನು ಮಾರಾಟ ಮಾಡಿದ್ದಾನೆ. ಆದ್ರೆ ಇದನ್ನು ಜಸ್ಟಿನ್ ನಿರಾಕರಿಸಿದ್ದಾನೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...