ಕೆಲ ಚೀನಾ ಕಂಪನಿಗಳು ಹಣ ನೀಡಿ ನಕಲಿ ವಿಮರ್ಶೆಯನ್ನು ಅಮೆಜಾನ್ ನಲ್ಲಿ ಹಾಕಿ ವಸ್ತುಗಳನ್ನು ಮಾರಾಟ ಮಾಡಿವೆ. ಫೈನಾನ್ಷಿಯಲ್ ಟೈಮ್ಸ್ ವರದಿಯಲ್ಲಿ ಈ ವಿಷಯ ಬಹಿರಂಗವಾಗಿದೆ. ಸುಮಾರು ಮೂರು ತಿಂಗಳಲ್ಲಿ ನಕಲಿ ವಿಮರ್ಶೆ ಮಾಡುವ ಮೂಲಕ ವಿಮರ್ಶಕರು ಕನಿಷ್ಠ 19 ಲಕ್ಷ ರೂಪಾಯಿ ಗಳಿಸಿದ್ದಾರೆ.
ಟಾಪ್ ವಿಮರ್ಶಕರು ಹಣವನ್ನು ತೆಗೆದುಕೊಳ್ಳುವ ಮೂಲಕ ಅಮೆಜಾನ್ನಲ್ಲಿ 5 ಸ್ಟಾರ್ ರೇಟಿಂಗ್ ನೀಡುತ್ತಿದ್ದರು. ಮೊದಲು ಅವರು ಉತ್ಪನ್ನವನ್ನು ಖರೀದಿಸುತ್ತಿದ್ದರು ಮತ್ತು ನಂತರ ಅಮೆಜಾನ್ನಲ್ಲಿ 5 ಸ್ಟಾರ್ ರೇಟಿಂಗ್ ನೀಡಿದ್ದರು. ನಂತರ ಅವುಗಳನ್ನು ಕಂಪನಿಗಳಿಗೆ ವಾಪಸ್ ನೀಡುವ ಜೊತೆಗೆ ಕೆಲವೊಂದು ಉಡುಗೊರೆಗಳನ್ನು ಪಡೆಯುತ್ತಿದ್ದರು.
ಜಸ್ಟಿನ್ ಫ್ರೈಯರ್ ಎಂಬ ವ್ಯಕ್ತಿ amazon uk ನಲ್ಲಿ ನಂಬರ್ 1 ವಿಮರ್ಶಕ. ಆಗಸ್ಟ್ ನಲ್ಲಿ 14 ಲಕ್ಷ ರೂಪಾಯಿ ಮೌಲ್ಯದ ವಸ್ತುಗಳ ವಿಮರ್ಶೆ ಮಾಡಿದ್ದಾನೆ. ಪ್ರತಿ 4 ಗಂಟೆಗಳಿಗೊಮ್ಮೆ ಹೊಸ ಐಟಂಗೆ 5 ಸ್ಟಾರ್ ನೀಡಿದ್ದಾನೆ. ವರದಿಯ ಪ್ರಕಾರ, ಜಸ್ಟಿನ್ ಅಮೆಜಾನ್ನಿಂದ ಖರೀದಿಸಿದ ವಸ್ತುಗಳನ್ನು ಇಬೇಯಲ್ಲಿ ಮಾರಾಟ ಮಾಡಿದ್ದಾನೆ. ಜೂನ್ನಿಂದ ಜಸ್ಟಿನ್ 19 ಲಕ್ಷ ರೂಪಾಯಿ ಮೌಲ್ಯದ ಸರಕುಗಳನ್ನು ಮಾರಾಟ ಮಾಡಿದ್ದಾನೆ. ಆದ್ರೆ ಇದನ್ನು ಜಸ್ಟಿನ್ ನಿರಾಕರಿಸಿದ್ದಾನೆ.