alex Certify ದೇಶಿ ವಿಮಾನ ಏರುವ ಮೊದಲು ನಿಮಗಿದು ತಿಳಿದಿರಲಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ದೇಶಿ ವಿಮಾನ ಏರುವ ಮೊದಲು ನಿಮಗಿದು ತಿಳಿದಿರಲಿ

ಲಾಕ್ ಡೌನ್ 4ರಲ್ಲಿ ದೇಶಿ ವಿಮಾನ ಹಾರಾಟಕ್ಕೆ ಅನುಮತಿ ನೀಡಲಾಗಿದೆ. ಮೇ 25 ರಿಂದ ದೇಶಿ ವಿಮಾನಗಳ ಹಾರಾಟ ಶುರುವಾಗಲಿದೆ. ಕೊರೊನಾ ಕಾರಣ ದೇಶಿ ವಿಮಾನ ಹಾರಾಟದಲ್ಲಿ ಅನೇಕ ನಿಯಮಗಳು ಬದಲಾಗ್ತಿವೆ. ವಿಮಾನ ಪ್ರಯಾಣಕ್ಕೂ ಮುನ್ನ ಹೊಸ ಮಾರ್ಗಸೂಚಿ ತಿಳಿದುಕೊಳ್ಳುವ ಅಗತ್ಯವಿದೆ.

ವಿಮಾನ ನಿಲ್ದಾಣಕ್ಕೆ ಪ್ರವೇಶಿಸಲು ಆರೋಗ್ಯ ಸೇತು ಆ್ಯಪ್ ಕಡ್ಡಾಯವಾಗಿದೆ. ಆರೋಗ್ಯ ಸೇತು ಆಪ್ ಇಲ್ಲದವರಿಗೆ ಪ್ರವೇಶಕ್ಕೆ ಅನುಮತಿ ನೀಡಲಾಗುವುದಿಲ್ಲ. 14 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಆರೋಗ್ಯ ಸೇತು ಅಪ್ಲಿಕೇಶನ್ ಕಡ್ಡಾಯವಲ್ಲ. ವಿಮಾನ ನಿಲ್ದಾಣದ ಟರ್ಮಿನಲ್ ಪ್ರವೇಶಿಸುವ ಮೊದಲು ಪ್ರಯಾಣಿಕರ ಥರ್ಮಲ್ ಸ್ಕ್ರೀನಿಂಗ್ ನಡೆಯಲಿದೆ.  ಆರೋಗ್ಯ ಸೇತು ಆ್ಯಪ್‌ನಲ್ಲಿ ಗ್ರೀನ್ ಸಿಗ್ನಲ್ ಕಾಣಿಸದ ಪ್ರಯಾಣಿಕರಿಗೆ ಪ್ರವೇಶ ನೀಡಲಾಗುವುದಿಲ್ಲ.

ನಿರ್ಗಮನ ಮತ್ತು ಆಗಮನದ ಮೇಲೆ ಟ್ರಾಲಿಯನ್ನು ಮಿತವಾಗಿ ಬಳಸಲಾಗುತ್ತದೆ. ಸಾಕಷ್ಟು ಅಗತ್ಯವಿರುವವರು ಮಾತ್ರ ಟ್ರಾಲಿಯನ್ನು ಬಳಸಲು ಅನುಮತಿ ನೀಡಲಾಗುವುದು. ವಿಮಾನ ನಿಲ್ದಾಣದ ಟರ್ಮಿನಲ್‌ಗಳು ಮತ್ತು ವಿಶ್ರಾಂತಿ ಕೋಣೆಗಳಲ್ಲಿ ಪತ್ರಿಕೆಗಳು ಮತ್ತು ನಿಯತಕಾಲಿಕೆಗಳಿಗೆ ಅನುಮತಿಸಲಾಗುವುದಿಲ್ಲ.

ವಿಮಾನ ನಿಲ್ದಾಣದ ಟರ್ಮಿನಲ್ ಕಟ್ಟಡವನ್ನು ಪ್ರವೇಶಿಸುವ ಮೊದಲು ಪ್ರಯಾಣಿಕರ ಚೀಲಗಳನ್ನು ಸಹ ಸ್ವಚ್ಛಗೊಳಿಸಬೇಕು. ಪ್ರವೇಶ ದ್ವಾರದಿಂದ ಬೋರ್ಡಿಂಗ್ ಗೇಟ್ ವರೆಗೆ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಕನಿಷ್ಠ 1 ಮೀಟರ್ ದೂರ ಕಡ್ಡಾಯ. ಪ್ರವೇಶದ್ವಾರದಲ್ಲಿ ಪ್ರಯಾಣಿಕರ ಬೂಟುಗಳನ್ನು ಸೋಂಕು ರಹಿತಗೊಳಿಸುವ ವ್ಯವಸ್ಥೆ ಇರುತ್ತದೆ. ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರು ಮತ್ತು ಸಿಬ್ಬಂದಿಗೆ ಹ್ಯಾಂಡ್ ಸ್ಯಾನಿಟೈಜರ್ ಲಭ್ಯವಿರುತ್ತದೆ.  ವಿಮಾನ ಪ್ರಯಾಣ ಪೂರ್ಣಗೊಂಡ ನಂತರ ವಿಮಾನ ನಿಲ್ದಾಣ ಆಡಳಿತವು ಚೀಲಗಳನ್ನು ಪುನಃ ಸ್ವಚ್ಛಗೊಳಿಸುತ್ತದೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...