ತನ್ನ ಲಕ್ಸೂರಿ ಅಪೇರಲ್ಗಳಿಂದ ಪ್ರಸಿದ್ದಿ ಪಡೆದಿರುವ ಲೂಯಿ ವಿಟ್ಟಾನ್ ಹ್ಯಾಂಡ್ಬ್ಯಾಗ್ಗಳನ್ನು ಖರೀದಿಸುವ ಕ್ರೇಜ್ ಸಿರಿವಂತ ಸಮುದಾಯದಲ್ಲಿ ಬಹಳ ಇದೆ.
ಇದೀಗ ವಿಮಾನ ಆಕೃತಿಯ ಹ್ಯಾಂಡ್ಬ್ಯಾಗ್ ಡಿಸೈನ್ ಒಂದನ್ನು ತಂದಿರುವ ಲೂಯಿ ವಿಟ್ಟಾನ್, ತನ್ನ ಎಂದಿನ ಗಿರಾಕಿಗಳಿಗೆ ಹೊಸ ಫ್ಯಾಶನ್ ಆಯ್ಕೆಯೊಂದನ್ನು ಸೃಷ್ಟಿಸಿದೆ.
ಮೂವರು ಉಗ್ರರು ಫಿನಿಶ್: ಶೋಪಿಯಾನ್ ನಲ್ಲಿ ಎನ್ ಕೌಂಟರ್
ಹೆಸರೇ ಹೇಳುವಂತೆ ವಿಮಾನದ ಆಕೃತಿಯಲ್ಲಿ ಈ ಬ್ಯಾಗ್ ವಿನ್ಯಾಸಗೊಳಿಸಲಾಗಿದ್ದು, ಚರ್ಮದಿಂದ ಇದನ್ನು ರಚಿಸಲಾಗಿದೆ. ಲೂಯಿ ವಿಟ್ಟಾನ್ ಸಿಗ್ನೇಚರ್ನ ಮೋನೋಗ್ರಾಂನೊಂದಿಗೆ ಇರುವ ಈ ಬ್ಯಾಗ್ನ ಬೆಲೆ ಎಷ್ಟು ಗೊತ್ತೇ..? ಬರೋಬ್ಬರಿ $39,000 ಅಂದರೆ 28.61 ಲಕ್ಷ ರೂ.ಗಳು.
ಬ್ಯಾಗ್ನ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ನೆಟ್ಟಿಗರಿಂದ ಮಿಶ್ರ ಪ್ರತಿಕ್ರಿಯೆ ಪಡೆದುಕೊಂಡಿದೆ. ಇದಕ್ಕಿಂತ ಕಡಿಮೆ ಬೆಲೆಗೆ ವಿಂಟೇಜ್ ವಿಮಾನವನ್ನೇ ಖರೀದಿ ಮಾಡಬಹುದು ಎಂದು ಕೆಲವರು ಅಣಕ ಮಾಡಿದ್ದಾರೆ.