alex Certify ಕರೊನಾ ಎಫೆಕ್ಟ್: ನೋಟು ಬಳಕೆಗೆ ಬೀಳಲಿದೆ ಬ್ರೇಕ್….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕರೊನಾ ಎಫೆಕ್ಟ್: ನೋಟು ಬಳಕೆಗೆ ಬೀಳಲಿದೆ ಬ್ರೇಕ್….!

ಕೊರೊನಾ ಸೋಂಕು ಜನರನ್ನು ಬಿಟ್ಟು ಬಿಡದೇ ಕಾಡುತ್ತಿದೆ. ಜನ ಎಚ್ಚೆತ್ತುಕೊಳ್ಳದೇ ಇದ್ದರೆ ಸೋಂಕು ಹರಡುವುದನ್ನು ತಪ್ಪಿಸಲು ಸಾಧ್ಯವಾಗುವುದಿಲ್ಲ. ಜನ ಸಂದಣಿ ಹೆಚ್ಚಾದಂತೆ ಸೋಂಕು ಹರಡುವುದು ಹೆಚ್ಚಾಗುತ್ತದೆ. ಹೀಗಾಗಿಯೇ ಲಾಕ್‌ಡೌನ್ ಮಾಡಲಾಗಿದೆ.

ತುರ್ತು ಸೇವೆಗಳನ್ನು ಹೊರತುಪಡಿಸಿದರೆ ಇನ್ನುಳಿದ ಸೇವೆಗಳಿಗೆ ಬ್ರೇಕ್ ಬಿದ್ದಿದೆ. ಇದೀಗ ನೋಟುಗಳ ಬಳಕೆಯನ್ನು ತಾತ್ಕಾಲಿಕವಾಗಿ ಸ್ಥಗಿತ ಮಾಡಲಾಗುತ್ತಿದೆ. ಹೌದು, ಅಹಮದಾಬಾದ್‌ನಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದೆ.

ನೋಟು ಬಳಕೆ ಮಾಡುವುದರಿಂದಲೂ ಕೊರೊನಾ ಸೋಂಕು ಹರಡಬಹುದು ಎಂಬ ಉದ್ದೇಶದಿಂದ ತಾತ್ಕಾಲಿಕವಾಗಿ ನೋಟುಗಳ ಬಳಕೆಯನ್ನೇ ನಿಲ್ಲಿಸುವ ನಿರ್ಧಾರ ಮಾಡಿದೆ ಗುಜರಾತ್ ಸರ್ಕಾರ.

ಯಾವುದೇ ಖರೀದಿ, ಯಾವುದೇ ವ್ಯವಹಾರವಾಗಲೀ ಎಲ್ಲವನ್ನೂ ಡಿಜಿಟಲ್ ಮೂಲಕವೇ ಹಣ ಪಾವತಿ ಮಾಡುವಂತೆ ಸೂಚಿಸಿದೆ. ಮೇ 15 ರಿಂದ ಎಲ್ಲರೂ ಡಿಜಿಟಲ್ ಮೂಲಕ ಹಣ ಪಾವತಿ ಮಾಡುವಂತೆ ಹೇಳಿದೆ.

ಇನ್ನು ಅಹಮದಾಬಾದ್‌ನಲ್ಲಿಯೇ 5 ಸಾವಿರ ಕೊರೊನಾ ಪಾಸಿಟಿವ್ ಕೇಸ್ ದಾಖಲಾಗಿವೆ. ಹೀಗಾಗಿ ಈ ನಿರ್ಧಾರಕ್ಕೆ ಗುಜರಾತ್ ಸರ್ಕಾರ ಬಂದಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...