alex Certify BIG NEWS: ಲಾಕ್ ಡೌನ್ ನಂತ್ರ ಬದಲಾಗಲಿದೆ ಇ-ಕಾಮರ್ಸ್ ಕಂಪನಿಗಳ ನಿಯಮ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಲಾಕ್ ಡೌನ್ ನಂತ್ರ ಬದಲಾಗಲಿದೆ ಇ-ಕಾಮರ್ಸ್ ಕಂಪನಿಗಳ ನಿಯಮ

ಮೇ 17 ರ ನಂತರ ದೇಶದ ಹಲವು ಭಾಗಗಳಲ್ಲಿ ಲಾಕ್‌ಡೌನ್ ಮುಗಿಯುವ ಸಾಧ್ಯತೆಯಿದೆ. ಕೆಲ ಪ್ರದೇಶಗಳಲ್ಲಿ ಮಾಲ್‌ಗಳು, ಮಲ್ಟಿಪ್ಲೆಕ್ಸ್ ಗಳು ಮತ್ತು ಇ-ಕಾಮರ್ಸ್ ವ್ಯವಹಾರ ಶುರುವಾಗಬಹುದು. ಆದ್ರೆ ಮೊದಲಿನಂತೆ ಯಾವುದೂ ಇರುವುದಿಲ್ಲ. ಇ-ಕಾಮರ್ಸ್ ಕಂಪನಿಗಳು ಕೂಡ ಕೆಲವೊಂದು ನಿಯಮಗಳನ್ನು ಪಾಲಿಸಬೇಕಿದೆ.

ಹೊಸ ಮಾದರಿ ಆಫ್‌ಲೈನ್‌ನಿಂದ ಆನ್‌ಲೈನ್‌ಗೆ ಹಸ್ತಾಂತರವಾಗಲಿದೆ. ಇ-ಕಾಮರ್ಸ್ ಪ್ಲಾಟ್‌ಫಾರ್ಮ್‌ನಲ್ಲಿ ದಿನಸಿ ಅಂಗಡಿಗಳು ವಿಸ್ತರಿಸಲಿವೆ. ಜಿಯೋಮಾರ್ಟ್ ಇ-ಕಾಮರ್ಸ್ ಮಾರ್ಗವನ್ನು ಬದಲಾಯಿಸುತ್ತದೆ. ಜಿಯೋ ಮಾರ್ಟ್ ಕೆಲವು ಸ್ಥಳಗಳಲ್ಲಿ ವಾಟ್ಸಾಪ್ ಮೂಲಕ ಆದೇಶಗಳನ್ನು ತೆಗೆದುಕೊಳ್ಳಲು ಪ್ರಾರಂಭಿಸಿದೆ.

ಅಮೆಜಾನ್ ಸಹ ಅಂಗಡಿಯವರೊಂದಿಗೆ ಕೈಜೋಡಿಸಲು ತಯಾರಿ ನಡೆಸುತ್ತಿದೆ. ಡಿಪಿಐಐಟಿ ಮತ್ತು ಸಿಎಐಟಿ ಸಹ ಕಿರಾಣಿ ಅಂಗಡಿಗಳ ಇ-ಪ್ಲಾಟ್‌ಫಾರ್ಮ್‌ಗಳನ್ನು ತಯಾರಿಸುತ್ತಿವೆ. ಡೆಲಿವರಿ ವಿಧಾನ ಕೂಡ ಬದಲಾಗಲಿದೆ. ಅಗತ್ಯವಲ್ಲದ ವಸ್ತುಗಳನ್ನು ವಿತರಿಸಲು ಸಮಯ ತೆಗೆದುಕೊಳ್ಳಲಾಗುವುದು. ಸಾಮಾಜಿಕ ಅಂತರ ಕೂಡ ಕಡ್ಡಾಯವಾಗಲಿದೆ. ಅಗತ್ಯ ವಸ್ತುಗಳನ್ನು ಜನರು ಆನ್ಲೈನ್ ನಲ್ಲಿ ಖರೀದಿಸುವ ಸಾಧ್ಯತೆ ಹೆಚ್ಚಿದ್ದು, ಕಂಪನಿಗಳು ಗೋದಾಮಿನ ಸಂಖ್ಯೆ ಹೆಚ್ಚಳಕ್ಕೆ ಮುಂದಾಗ್ತಿವೆ. ರಿಯಾಯಿತಿ ಕಡಿಮೆಯಾಗುವ ಸಾಧ್ಯತೆಯಿದೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...