alex Certify ʼಆಧಾರ್ʼ​ ಕಾರ್ಡ್​ದಾರರಿಗೆ ಹೊಸ ಸೌಲಭ್ಯ ಒದಗಿಸಿದ UIDAI | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼಆಧಾರ್ʼ​ ಕಾರ್ಡ್​ದಾರರಿಗೆ ಹೊಸ ಸೌಲಭ್ಯ ಒದಗಿಸಿದ UIDAI

ಆಧಾರ್​ ಕಾರ್ಡ್​ ಹೊಂದಿರುವ ಭಾರತೀಯ ನಾಗರಿಕರು ಎಂಆಧಾರ್​ ಅಪ್ಲಿಕೇಶನ್​​ನಲ್ಲಿ ಐದು ಪ್ರೊಫೈಲ್​ಗಳನ್ನ ಸೇರಿಸಬಹುದು ಎಂದು ವಿಶಿಷ್ಟ ಗುರುತು ಪ್ರಾಧಿಕಾರ ಮಾಹಿತಿ ನೀಡಿದೆ.

ಈ ಸೌಲಭ್ಯವನ್ನ ಪಡೆಯಲಿಕ್ಕಾಗಿ ಜನತೆ ತಮ್ಮ ಮೊಬೈಲ್​ನಲ್ಲಿರುವ ಎಂಆಧಾರ್​ ಅಪ್ಲಿಕೇಶನ್​ನ್ನು ಅಪ್​ಡೇಟ್​ ಮಾಡಬೇಕಾಗುತ್ತದೆ.

ಈ ಸಂಬಂಧ ಟ್ವೀಟ್​ ಮಾಡಿರುವ ವಿಶಿಷ್ಟ ಗುರುತು ಪ್ರಾಧಿಕಾರ, ನೀವು ನಿಮ್ಮ ಎಂಆಧಾರ್ ಅಪ್ಲಿಕೇಶನ್​ ಮೂಲಕ 5 ಪ್ರೊಫೈಲ್​ಗಳನ್ನ ಸೇರಿಸಬಹುದಾಗಿದೆ. ನೋಂದಾಯಿತ ಮೊಬೈಲ್​ ಸಂಖ್ಯೆಗೆ ನಿಮ್ಮ ಒಟಿಪಿ ಬರಲಿದೆ. https://tinyurl.com/yx32kkeq (android), https://tinyurl.com/taj87tg (iOS) ವೆಬ್​ಸೈಟ್​ಗಳ ಮೂಲಕ ಹೊಸ ಎಂಆಧಾರ್​ ಅಪ್ಲಿಕೇಶನ್​ಗಳನ್ನ ಡೌನ್​ಲೋಡ್​ ಮಾಡಿಕೊಳ್ಳಬಹುದಾಗಿದೆ.

ಇದಕ್ಕಾಗಿ ಬಳಕೆದಾರರು ಸಂಪೂರ್ಣ ವಿವರವನ್ನ ಎಂಆಧಾರ್​ ಅಪ್ಲಿಕೇಶನ್​​ಗೆ ಸಲ್ಲಿಸಬೇಕಾಗುತ್ತದೆ. ಹಾಗೂ ನೊಂದಾಯಿತ ಮೊಬೈಲ್​ ಸಂಖ್ಯೆಗೆ ಒಟಿಪಿ ಬರಲಿದೆ.

ಒಂದು ವೇಳೆ ಈ ಪ್ರಕ್ರಿಯೆಯಲ್ಲಿ ಯಾವುದೇ ಬಳಕೆದಾರರಿಗೆ ದೋಷ ಕಂಡು ಬಂದಲ್ಲಿ ಅವರು ಅಪ್ಲಿಕೇಶನ್​ನ್ನು ಅನ್​ಇನ್​ಸ್ಟಾಲ್​ ಬಳಿಕ ಪುನಃ ಇನ್​ಸ್ಟಾಲ್​ ಮಾಡುವಂತೆ ವಿಶಿಷ್ಟ ಗುರುತು ಪ್ರಾಧಿಕಾರ ಸಲಹೆ ನೀಡಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...