alex Certify ʼಆಧಾರ್ʼ​ ಎಲ್ಲೆಲ್ಲಿ ಬಳಕೆಯಾಗಿದೆ ಎಂಬುದನ್ನು ತಿಳಿಯಬೇಕೇ…? ಇಲ್ಲಿದೆ ಈ ಕುರಿತ ಸಂಪೂರ್ಣ ಮಾಹಿತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼಆಧಾರ್ʼ​ ಎಲ್ಲೆಲ್ಲಿ ಬಳಕೆಯಾಗಿದೆ ಎಂಬುದನ್ನು ತಿಳಿಯಬೇಕೇ…? ಇಲ್ಲಿದೆ ಈ ಕುರಿತ ಸಂಪೂರ್ಣ ಮಾಹಿತಿ

ಈಗಿನ ಯುಗ ಹೇಗಿದೆ ಅಂದರೆ ಸಿಮ್​ ಕಾರ್ಡ್​ ಕೊಂಡುಕೊಳ್ಳೋದ್ರಿಂದ ಹಿಡಿದು ಬ್ಯಾಂಕ್​ ಖಾತೆ ತೆರೆಯುವರೆಗೂ ಆಧಾರ್​ ಕಾರ್ಡ್​ನ ಅವಶ್ಯಕತೆ ಇದ್ದೇ ಇರುತ್ತೆ. ಇದರ ಹೊರತಾಗಿ ಪಿಎಂ ಕಿಸಾನ್​ ಇಲ್ಲವೇ ಪ್ರಧಾನಮಂತ್ರಿ ಆವಾಸ್​ ಯೋಜನೆ ಸೇರಿದಂತೆ ಸರ್ಕಾರದ ವಿವಿಧ ಸೌಕರ್ಯಗಳ ಫಲಾನುಭವಿ ಆಗಬೇಕು ಅಂದ್ರುನೂ ಆಧಾರ್​ ಕಾರ್ಡ್​ ಹೊಂದಿರೋದು ಕಡ್ಡಾಯ.

12 ಅಂಕೆಯ ಈ ಆಧಾರ್​ ಕಾರ್ಡ್​ ಅತ್ಯಂತ ಮಹತ್ವದ ಐಡಿ ಕಾರ್ಡ್​ಗಳಲ್ಲಿ ಒಂದಾಗಿದೆ. ಆಧಾರ್​ ಕಾರ್ಡ್​ನಿಂದ ಇಷ್ಟೆಲ್ಲ ಉಪಯೋಗ ಇದೆ ಅಂದಮೇಲೆ ಅದರ ಬಳಕೆಯನ್ನೂ ನಾವು ಸರಿಯಾದ ರೀತಿಯಲ್ಲಿ ಮಾಡಬೇಕು. ಆಧಾರ್​ ಕಾರ್ಡ್ ಯಾವುದೇ ರೀತಿಯಲ್ಲಿ ದುರುಪಯೋಗ ಆಗದಂತೆ ಎಚ್ಚರಿಕೆ ವಹಿಸೋದೂ ಅಗತ್ಯ.

ಆಧಾರ್​ ಕಾರ್ಡ್​ನ್ನು ವಿತರಿಸುವ ವಿಶಿಷ್ಟ ಗುರುತು ಪ್ರಾಧಿಕಾರ ಆಧಾರ್​ ಕಾರ್ಡ್​ದಾರರಿಗೆ ಹೊಸದೊಂದು ಆಯ್ಕೆಯನ್ನ ನೀಡಿದ್ದು ಇದರ ಸಹಾಯದಿಂದ ನೀವು ಕಳೆದ 6 ತಿಂಗಳಲ್ಲಿ ನಿಮ್ಮ ಆಧಾರ್​ ಕಾರ್ಡ್​ ಎಷ್ಟು ಬಾರಿ ಹಾಗೂ ಎಲ್ಲೆಲ್ಲಿ ಬಳಕೆಯಾಗಿದೆ ಅನ್ನೋದನ್ನ ನೋಡಬಹುದಾಗಿದೆ. ಇದರ ಸಹಾಯದಿಂದ ನೀವು ನಿಮ್ಮ ಕಾರ್ಡ್ ದುರುಪಯೋಗ ಆಗುತ್ತಿದೆಯೋ ಇಲ್ಲವೋ ಅನ್ನೋದನ್ನ ತಿಳಿದುಕೊಳ್ಳಬಹುದಾಗಿದೆ.

ಈ ಸಂಬಂಧ ಟ್ವೀಟ್​ ಮೂಲಕ ಮಾಹಿತಿ ನೀಡಿರುವ ವಿಶಿಷ್ಟ ಗುರುತು ಪ್ರಾಧಿಕಾರ, ನಿಮ್ಮ ಆಧಾರ್​ ಕಾರ್ಡ್ ಕಳೆದ 6 ತಿಂಗಳಲ್ಲಿ ಎಲ್ಲೆಲ್ಲಿ ಬಳಕೆಯಾಗಿದೆ ಅನ್ನೋದನ್ನ ತಿಳಿದುಕೊಳ್ಳವಹುದು.​ ಹಿಂದಿನ 50 ಬಾರಿ ಎಲ್ಲೆಲ್ಲಿ ಬಳಕೆಯಾಗಿದೆ ಅನ್ನೋದನ್ನ ತಿಳಿದುಕೊಳ್ಳೋಕೆ ನಿಮಗೆ ಅವಕಾಶ ಇದೆ.   https://t.co/j6YZhe4HYW” rel=”nofollow  ಲಿಂಕ್​​ನಲ್ಲಿ ಪರಿಶೀಲನೆ ಮಾಡಿ ಎಂದು ಮಾಹಿತಿ ನೀಡಿದೆ.

ಆಧಾರ್​ ಕಾರ್ಡ್ ಅಥೆಂಟಿಕೇಶನ್​ ಹಿಸ್ಟರಿ ತಿಳಿಯಲು ಹೀಗೆ ಮಾಡಿ :

ಎಲ್ಲಕ್ಕಿಂತ ಮೊದಲು ಯುಐಡಿಎಐ ಅಧಿಕೃತ ವೆಬ್​ಸೈಟ್​ https://resident.uidai.gov.in/ ಗೆ ಲಾಗಿನ್​ ಆಗಿ

ವೆಬ್​ಸೈಟ್​ನಲ್ಲಿ ಮೈ ಆಧಾರ್​ ಎಂಬ ಆಯ್ಕೆಯ ಮೇಲೆ ಕ್ಲಿಕ್​ ಮಾಡಿ

ಇಲ್ಲಿ ಆಧಾರ್​ ಸರ್ವೀಸ್​ ಎಂಬ ಆಯ್ಕೆಯ ಕೆಳಗೆ ಆಧಾರ್ ಅಥೆಂಟಿಕೇಶನ್​ ಹಿಸ್ಟರಿ ಎಂಬ ಆಯ್ಕೆ ಸಿಗಲಿದೆ

ಈಗ ಆಧಾರ್​ ಸಂಖ್ಯೆಯ ಜೊತೆಗೆ ಕ್ಯಾಪ್ಚಾ ಕೋಡ್​ನ್ನೂ ನಮೂದಿಸಿ. ಸೆಂಡ್​ ಒಟಿಪಿ ಆಯ್ಕೆ ಮೇಲೆ ಕ್ಲಿಕ್​ ಮಾಡಿ

ನಿಮ್ಮ ನೋಂದಾಯಿತ ಮೊಬೈಲ್​ ಸಂಖ್ಯೆಗೆ ಬಂದ ಓಟಿಪಿಯನ್ನ ನಮೂದಿಸಿ

ಈಗ ನಿಮಗೆ ನಿಮ್ಮ ಆಧಾರ್​ ಕಾರ್ಡ್​ ಹಿಂದಿನ 50 ಬಾರಿ ಎಲ್ಲೆಲ್ಲಿ ಬಳಕೆಯಾಗಿದೆ ಎಂಬ ಮಾಹಿತಿ ಸಿಗಲಿದೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...