alex Certify ಬೆರಗಾಗಿಸುವಂತಿದೆ ಈ ಪುಟ್ಟ ಬಾಲಕನ ಗಳಿಕೆ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬೆರಗಾಗಿಸುವಂತಿದೆ ಈ ಪುಟ್ಟ ಬಾಲಕನ ಗಳಿಕೆ….!

ನಾವೆಲ್ಲಾ ಒಂಬತ್ತು ವರ್ಷ ವಯಸ್ಸಿನವರಾಗಿದ್ದ ವೇಳೆ ಶಾಲೆಗೆ ಹೋಗುತ್ತಿದ್ದ ಟೈಮಲ್ಲಿ ಆಟಿಕೆಗಳನ್ನು ಬಹಳ ಇಷ್ಟ ಪಡುತ್ತಿದ್ದೆವು.

ಇಲ್ಲೊಬ್ಬ ಒಂಬತ್ತರ ಪೋರನಿಗೂ ಸಹ ಆಟಿಕೆಗಳು ಎಂದರೆ ಇಷ್ಟ. ಆದರೆ ಈತನ ಆಟ ಬಯಲಿನಲ್ಲಲ್ಲ ಬದಲಾಗಿ ಆನ್ಲೈನ್‌ ಫೀಲ್ಡ್‌ನಲ್ಲಿ.

ಹೌದು! ಯೂಟ್ಯೂಬ್‌ನಲ್ಲಿ ಚಾನೆಲ್‌ ಮಾಡಿಕೊಂಡಿರುವ ರ‍್ಯಾನ್ ಕಾಜಿ, ಆಟಿಕೆಗಳ ರಿವ್ಯೂ ಮಾಡುವ ಮೂಲಕ ಮಿಲಿಯನ್‌ಗಟ್ಟಲೇ ಡಾಲರ್‌ಗಳನ್ನು ಸಂಪಾದಿಸುತ್ತಿದ್ದಾನೆ. ಟೆಕ್ಸಾಸ್‌ ರಾಜ್ಯದ ರ‍್ಯಾನ್‌ ನಡೆಸುವ ಚಾನೆಲ್‌ಗೆ 27 ದಶಲಕ್ಷಕ್ಕಿಂತ ಹೆಚ್ಚು ಚಂದಾದಾರರಿದ್ದಾರೆ.

2020ರ ವರ್ಷದಲ್ಲಿ ಅತ್ಯಂತ ಹೆಚ್ಚು ಸಂಪಾದನೆ ಮಾಡಿದ ಯೂಟ್ಯೂಬರ್‌ ಆಗಿರುವ ರ‍್ಯಾನ್‌, ತನ್ನ ಚಾನೆಲ್‌ ಮೂಲಕವೇ $30 ದಶಲಕ್ಷ ಸಂಪಾದಿಸಿದ್ದಾನೆ. 2019ರಲ್ಲೂ ಈತನೇ ಟಾಪ್‌ನಲ್ಲಿದ್ದು, $26 ದಶಲಕ್ಷ ಸಂಪಾದಿಸಿದ್ದ. 2018ರಲ್ಲಿ ಈತನ ಗಳಿಕೆ $17 ದಶಲಕ್ಷದಷ್ಟಿದ್ದು, ಸತತ ಮೂರು ವರ್ಷಗಳಿಂದ ರ‍್ಯಾನ್‌ ಯೂಟ್ಯೂಬ್ ಗಳಿಕೆಯಲ್ಲಿ ಟಾಪ್‌ನಲ್ಲಿದ್ದಾನೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...