ಕೇಂದ್ರ ಸರ್ಕಾರಿ ನೌಕರರಿಗೆ ಏಳನೇ ವೇತನಾ ಆಯೋಗದ ಶಿಫಾರಸಿನಂತೆ ತುಟ್ಟಿ ಭತ್ಯೆ ಹೆಚ್ಚಳ ಮಾಡಲು ಕೈಗೊಂಡ ನಿರ್ಣಯವು ಜುಲೈ 1ರಿಂದ ಅನುಷ್ಠಾನಕ್ಕೆ ಬರಲಿದ್ದು, ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರವು ಮಹತ್ವದ ಘೋಷಣೆ ಮಾಡಲಿದೆ ಎಂದು ವರದಿಗಳು ಬಂದಿವೆ.
ಇದೇ ವೇಳೆ, ಅಖಿಲ ಭಾರತ ಗ್ರಾಹಕ ಬೆಲೆ ಸೂಚ್ಯಂಕದ (ಎಐಸಿಪಿಐ) ಜನವರಿ 2021ರ ದತ್ತಾಂಶ ಬಿಡುಗಡೆ ಮಾಡಲಾಗಿದ್ದು, ಇದರ ಮಾಹಿತಿ ಆಧರಿಸಿ ಜುಲೈ 2021ರ ತುಟ್ಟಿ ಭತ್ಯೆಯು 3 ಪ್ರತಿಶತದಷ್ಟು ಇರುವ ಸಾಧ್ಯತೆ ಇದೆ.
Wimblendon BIG BREAKING: ವಿಂಬಲ್ಡನ್ ಫೈನಲ್, ಮೊದಲ ಪ್ರಶಸ್ತಿ ಗೆದ್ದ ಆಶ್ ಬಾರ್ಟಿ
ಡಿಎನಲ್ಲಿ ಮೂರು ಪ್ರತಿಶತದಷ್ಟು ಹೆಚ್ಚಳವನ್ನು ಸೆಪ್ಟೆಂಬರ್‌ನಿಂದ ಸೇರಿಸುವ ಸಾಧ್ಯತೆ ಇದೆ. ಸದ್ಯದ ಮಟ್ಟಿಗೆ ನೌಕರರಿಗೆ 17 ಪ್ರತಿಶತದಷ್ಟು ಡಿಎ ಸಿಗುತ್ತಿದ್ದು, ಜುಲೈ ತಿಂಗಳ ಡಿಎ ಅನ್ನು ಸೆಪ್ಟೆಂಬರ್‌ನಲ್ಲಿ ಸೇರಿಸಿ ಕೊಡುವ ಸಾಧ್ಯತೆ ಇದೆ.
Sex Racket Busted: ವೇಶ್ಯಾವಾಟಿಕೆಯಲ್ಲಿ ತೊಡಗಿದ್ದ 10 ಮಂದಿ ಅರೆಸ್ಟ್, ಅದೇ ಮನೆಯಲ್ಲಿದ್ರು ವಿದ್ಯಾರ್ಥಿಗಳು
ಇದಕ್ಕೂ ಮುನ್ನ, 4%, 3% ಹಾಗೂ 4% ಡಿಎ ಬರಬೇಕಾಗಿತ್ತು. ಆದರೆ ಕೋವಿಡ್ ಸಂಕಷ್ಟದಿಂದಾಗಿ ಈ ಹೆಚ್ಚಳವನ್ನು ಮುಂದೂಡಲಾಗಿತ್ತು. ಎಐಸಿಪಿಐ ದತ್ತಾಂಶದ ಪ್ರಕಾರ ಡಿಎನಲ್ಲಿ 3% ಹೆಚ್ಚಳವಾಗುವ ನಿರೀಕ್ಷೆಯಿದ್ದು, ಒಟ್ಟಾರೆ 31% ಡಿಎ ಅನ್ನು ಸೆಪ್ಟೆಂಬರ್‌ನಲ್ಲಿ ಕೇಂದ್ರ ಸರ್ಕಾರಿ ನೌಕರರು ಪಡೆಯಲಿದ್ದಾರೆ.