ದಕ್ಷಿಣ ಆಫ್ರಿಕಾದ ಬೋಟ್ಸ್ವಾನಾದಲ್ಲಿ ಬರೋಬ್ಬರಿ 378 ಕ್ಯಾರೆಟ್ ಬಿಳಿ ವಜ್ರ ಕಂಡುಬಂದಿದೆ. ವಜ್ರವನ್ನು ಶೋಧಿಸಿದ ಕಂಪನಿ ಇದು ಅದ್ಭುತ ಮತ್ತು ಭವ್ಯವಾದ ವಜ್ರ ಎಂದು ಬಣ್ಣಿಸಿದೆ.
ಅಂದ ಹಾಗೆ, ಜನವರಿ 15 ರಂದು ಕೆನಡಾ ವ್ಯಾಂಕೋವರ್ ಮೂಲದ ಕಂಪನಿ ಈ ವಜ್ರವನ್ನು ಶೋಧಿಸಿದೆ. ಕಂಪನಿ ಈ ಬಗ್ಗೆ ಮಾಹಿತಿ ನೀಡಿದ್ದು, ವಜ್ರವನ್ನು 341 ಕ್ಯಾರೆಟ್ ಟಾಪ್ ವೈಟ್ ಜೆಮ್ ಕ್ವಾಲಿಟಿ ಡೈಮಂಡ್ ಆಗಿ ಪರಿವರ್ತಿಸಿದಾಗ ಇದರ ಮೌಲ್ಯ 15 ಮಿಲಿಯನ್ ಡಾಲರ್(ಅಂದಾಜು 110 ಕೋಟಿ ರೂಪಾಯಿ) ಎಂದು ಅಂದಾಜಿಸಲಾಗಿದೆ.
2012 ರಲ್ಲಿ ಕಂಪನಿ ಈ ಗಣಿಯಲ್ಲಿ ಕಾರ್ಯಾಚರಣೆ ಆರಂಭಿಸಿದೆ. ವಾಣಿಜ್ಯ ಕಾರ್ಯಾಚರಣೆಯನ್ನು ಪ್ರಾರಂಭಿಸಿದಾಗಿನಿಂದ ಓಪನ್-ಪಿಟ್ ಕರೋವ್ ಮೈನ್ನಿಂದ 200 ಕ್ಯಾರೆಟ್ಗಳಿಗಿಂತ ಹೆಚ್ಚಿನದಾದ 55 ನೇ ವಜ್ರ ಇದಾಗಿದೆ. 300 ಕ್ಯಾರೆಟ್ ಗಿಂತ ಹೆಚ್ಚಿನದಾದ ಎರಡನೇ ವಜ್ರವಾಗಿದೆ ಎಂದು ಹೇಳಲಾಗಿದೆ.
https://twitter.com/LucaraDiamond/status/1349854322927038471