alex Certify ಸಮೀಕ್ಷೆಯಲ್ಲಿ ಬಯಲಾಯ್ತು ಶಾಕಿಂಗ್ ಮಾಹಿತಿ, 24 ಲಕ್ಷ ಉದ್ಯೋಗಕ್ಕೆ ಕುತ್ತು ತಂದ ಕೊರೋನಾ ಲಾಕ್ ಡೌನ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಮೀಕ್ಷೆಯಲ್ಲಿ ಬಯಲಾಯ್ತು ಶಾಕಿಂಗ್ ಮಾಹಿತಿ, 24 ಲಕ್ಷ ಉದ್ಯೋಗಕ್ಕೆ ಕುತ್ತು ತಂದ ಕೊರೋನಾ ಲಾಕ್ ಡೌನ್

ನವದೆಹಲಿ: ಕೊರೋನಾ ಲಾಕ್ಡೌನ್ ನಿಂದ 23.6 ಲಕ್ಷ ಉದ್ಯೋಗಕ್ಕೆ ಕುತ್ತು ಉಂಟಾಗಿದೆ. ದೇಶದ ಪ್ರಮುಖ ಕೃಷಿಯೇತರ ವಲಯಗಳಲ್ಲಿ 23.6 ಲಕ್ಷ ಜನರು ಉದ್ಯೋಗ ಕಳೆದುಕೊಂಡಿದ್ದಾರೆ ಎಂದು ಕೇಂದ್ರ ಸರ್ಕಾರ ನಡೆಸಿದ ಸಮೀಕ್ಷೆಯಲ್ಲಿ ಮಾಹಿತಿ ಬಯಲಾಗಿದೆ.

ಮೊದಲ ಕೋವಿಡ್ ಲಾಕ್ ಡೌನ್ ಅವಧಿಯಲ್ಲಿ 9 ಕೃಷಿಯೇತರ ವಲಯಗಳಲ್ಲಿ 23.6 ಲಕ್ಷ ಜನರು ಉದ್ಯೋಗ ಕಳೆದುಕೊಂಡಿದ್ದಾರೆ ಎಂದು ಕೇಂದ್ರ ಕಾರ್ಮಿಕ ಸಚಿವಾಲಯ ಹೇಳಿದೆ.

ನಿಯೋಜನೆಗೂ ಮುನ್ನ 3.07 ಕೋಟಿ ಕಾರ್ಮಿಕರಿದ್ದರು. ಇದರಲ್ಲಿ 2.17 ಪುರುಷರು ಮತ್ತು 9 ಮಿಲಿಯನ್ ಮಹಿಳೆಯರು ಸೇರಿದ್ದಾರೆ. ಈ ಸಂಖ್ಯೆ 2.84 ಕೋಟಿಗೆ ಇಳಿದಿದೆ. ಪುರುಷರು 2.1 ಕೋಟಿ ಮತ್ತು ಮಹಿಳೆಯರು 83.3 ಲಕ್ಷ. 16.6 ಪ್ರತಿಶತದಷ್ಟು ಜನರು ತಮ್ಮ ವೇತನ ಕುಸಿತ ಕಂಡಿದ್ದಾರೆ. ಲಾಕ್ ಡೌನ್ ಅವಧಿಯಲ್ಲಿ ಉತ್ಪಾದನಾ ವಲಯದಲ್ಲಿ ಅತಿದೊಡ್ಡ ಉದ್ಯೋಗ ನಷ್ಟವಾಗಿದೆ ಎಂದು ಸಮೀಕ್ಷೆ ಬಹಿರಂಗಪಡಿಸಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...