ನವದೆಹಲಿ: ಕೊರೋನಾ ಲಾಕ್ಡೌನ್ ನಿಂದ 23.6 ಲಕ್ಷ ಉದ್ಯೋಗಕ್ಕೆ ಕುತ್ತು ಉಂಟಾಗಿದೆ. ದೇಶದ ಪ್ರಮುಖ ಕೃಷಿಯೇತರ ವಲಯಗಳಲ್ಲಿ 23.6 ಲಕ್ಷ ಜನರು ಉದ್ಯೋಗ ಕಳೆದುಕೊಂಡಿದ್ದಾರೆ ಎಂದು ಕೇಂದ್ರ ಸರ್ಕಾರ ನಡೆಸಿದ ಸಮೀಕ್ಷೆಯಲ್ಲಿ ಮಾಹಿತಿ ಬಯಲಾಗಿದೆ.
ಮೊದಲ ಕೋವಿಡ್ ಲಾಕ್ ಡೌನ್ ಅವಧಿಯಲ್ಲಿ 9 ಕೃಷಿಯೇತರ ವಲಯಗಳಲ್ಲಿ 23.6 ಲಕ್ಷ ಜನರು ಉದ್ಯೋಗ ಕಳೆದುಕೊಂಡಿದ್ದಾರೆ ಎಂದು ಕೇಂದ್ರ ಕಾರ್ಮಿಕ ಸಚಿವಾಲಯ ಹೇಳಿದೆ.
ನಿಯೋಜನೆಗೂ ಮುನ್ನ 3.07 ಕೋಟಿ ಕಾರ್ಮಿಕರಿದ್ದರು. ಇದರಲ್ಲಿ 2.17 ಪುರುಷರು ಮತ್ತು 9 ಮಿಲಿಯನ್ ಮಹಿಳೆಯರು ಸೇರಿದ್ದಾರೆ. ಈ ಸಂಖ್ಯೆ 2.84 ಕೋಟಿಗೆ ಇಳಿದಿದೆ. ಪುರುಷರು 2.1 ಕೋಟಿ ಮತ್ತು ಮಹಿಳೆಯರು 83.3 ಲಕ್ಷ. 16.6 ಪ್ರತಿಶತದಷ್ಟು ಜನರು ತಮ್ಮ ವೇತನ ಕುಸಿತ ಕಂಡಿದ್ದಾರೆ. ಲಾಕ್ ಡೌನ್ ಅವಧಿಯಲ್ಲಿ ಉತ್ಪಾದನಾ ವಲಯದಲ್ಲಿ ಅತಿದೊಡ್ಡ ಉದ್ಯೋಗ ನಷ್ಟವಾಗಿದೆ ಎಂದು ಸಮೀಕ್ಷೆ ಬಹಿರಂಗಪಡಿಸಿದೆ.