alex Certify ಹೊಸ ಅವತಾರದಲ್ಲಿ ಮಾರುಕಟ್ಟೆಗೆ ಬರಲಿದೆ ರಾಯಲ್​​ ಎನ್​ಫೀಲ್ಡ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹೊಸ ಅವತಾರದಲ್ಲಿ ಮಾರುಕಟ್ಟೆಗೆ ಬರಲಿದೆ ರಾಯಲ್​​ ಎನ್​ಫೀಲ್ಡ್

ರಾಯಲ್​ ಎನ್​ಫೀಲ್ಡ್​ ಬೈಕ್​ ಅಂದ್ರೆ ನನಗಿಷ್ಟ ಇಲ್ಲ ಅನ್ನೋ ಬೈಕ್​ ಪ್ರಿಯರು ಸಿಗೋದೇ ಕಡಿಮೆ. ವಿಶೇಷವಾದ ಡಿಸೈನ್​​ಗಳ ಮೂಲಕ ರಾಯಲ್​ ಎನ್​ಫೀಲ್ಡ್ ಬೈಕ್​ಗಳು ಗ್ರಾಹಕರ ಗಮನವನ್ನ ಸೆಳೆಯುತ್ತಲೇ ಬಂದಿದೆ. ಮಾರುಕಟ್ಟೆಯಲ್ಲಿ ಹೆಚ್ಚುತ್ತಿರುವ ಬೇಡಿಕೆಯನ್ನ ಗಮನದಲ್ಲಿಟ್ಟುಕ್ಕೊಂಡು ರಾಯಲ್​ ಎನ್​ಫೀಲ್ಡ್ ಹಿಮಾಲಯನ್​ ಕೆಲವೇ ದಿನಗಳಲ್ಲಿ ಮೂರು ಹೊಸ ಅವತಾರಗಳಲ್ಲಿ ನಿಮ್ಮ ಮುಂದೆ ಬರಲಿದೆ.

ವಿನ್ಯಾಸದ ವಿಚಾರಕ್ಕೆ ಬಂದರೆ ಪರಿಷ್ಕೃತ ಹಿಮಾಲಯನ್​ ಬೈಕ್​​ಗಳು ಮೊದಲಿದ್ದ ವಿನ್ಯಾಸವನ್ನೇ ಮುಂದುವರಿಸಲಿವೆ. ಸಣ್ಣ ಸಣ್ಣ ಬದಲಾವಣೆ ಅಂದರೆ ಫ್ಯುಯಲ್​ ಟ್ಯಾಂಕ್​​ನ ಬಳಿ ಕೆಲ ಬದಲಾವಣೆಗಳನ್ನ ತರಲಾಗಿದೆ. ಆದರೆ ಪರಿಷ್ಕೃತ ಹಿಮಾಲಯನ್​ ಬೈಕ್​ಗಳಲ್ಲಿ ಗ್ರಾಹಕರಿಗೆ ಹೆಚ್ಚಿನ ಬಣ್ಣದ ಬೈಕ್​​ಗಳು ಆಯ್ಕೆಗೆ ಸಿಗಲಿದೆ. ಈ ಬಾರಿ ಹಿಮಾಲಯನ್​ ಬೆಳ್ಳಿ, ಮ್ಯಾಟ್​ ಕಪ್ಪು ಹಾಗೂ ಪೈನ್​​ ಹಸಿರು ಬಣ್ಣದಲ್ಲಿ ಮಾರುಕಟ್ಟೆಗೆ ಲಗ್ಗೆ ಇಡಲಿದೆ.

ಬಹುಶಃ ಈಗಿರುವ ಬಿಳಿ ಬಣ್ಣದ ಬೈಕ್​​ಗಳನ್ನ ಕಂಪನಿ ನಿಲ್ಲಿಸುವ ಸಾಧ್ಯತೆ ಇದೆ. ಈ ಜಾಗಕ್ಕೆ ಗ್ರೇವೆಲ್ ಗ್ರೇ, ಸ್ಲೀಟ್ ಗ್ರೇ, ಸ್ನೋ ವೈಟ್, ಗ್ರಾನೈಟ್ ಬ್ಲ್ಯಾಕ್, ರಾಕ್ ರೆಡ್ ಮತ್ತು ಲೇಕ್ ಬ್ಲೂ ಬಣ್ಣಗಳ ಆಯ್ಕೆಯನ್ನ ನೀಡಲಾಗುತ್ತೆ.

2021ರ ಹಿಮಾಲಯನ್​ ಬೈಕ್​ನ ಪ್ರಮುಖ ನವೀಕರಣ ಅಂದರೆ ಟ್ರಿಪ್ಪರ್​ ನ್ಯಾವಿಗೇಷನ್​. ರಾಯಲ್​​ ಎನ್​ಫೀಲ್ಡ್​ ಮೆಟೋರ್​ 350 ಬೈಕ್​​ನಲ್ಲಿ ಮೊದಲು ಇದನ್ನ ಪರಿಚಯಿಸಲಾಗಿತ್ತು. ಇದು ನ್ಯಾವಿಗೇಷನ್​ ಪರದೆಯನ್ನ ಹೊಂದಿರೋದ್ರಿಂದ ನೀವು ಮೊಬೈಲ್​ನಲ್ಲಿ ಮ್ಯಾಪ್​ ನೋಡೋದು ತಪ್ಪುತ್ತೆ. ನಿಮ್ಮ ಮೊಬೈಲ್​ನ್ನ ಈ ಸ್ಕ್ರೀನ್​ ಜೊತೆ ಕನೆಕ್ಟ್ ಮಾಡಿದ ಬಳಿಕ ಬೈಕ್​ನ ನೇವಿಗೇಷನ್​ ಸ್ಕ್ರೀನ್​ನಲ್ಲೇ ನಿಮಗೆ ನೀವು ತಲುಪಬೇಕಾದ ಜಾಗದ ನಕ್ಷೆ ಕಾಣಲಿದೆ.

ಇದು ಇಂಜಿನ್​ಗಳಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ. ಆದರೆ ಈಗಿರುವ ಹಿಮಾಲಯನ್​ ಬೈಕ್​​ಗಿಂತ ಪರಿಷ್ಕೃತ ಬೈಕ್​​ನ ಬೆಲೆ ಕೊಂಚ ಹೆಚ್ಚಿರಲಿದೆ. ಪ್ರಸ್ತುತ ಹಿಮಾಲಯನ್​ ಮಾಡಲ್​​ 1.91 ಲಕ್ಷದಿಂದ 1.96 ಲಕ್ಷಕ್ಕೆ ಸಿಗುತ್ತೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...