alex Certify 20 ಲಕ್ಷ ಕೋಟಿ ರೂ. ಪ್ಯಾಕೇಜ್ ನಲ್ಲಿ ಯಾರಿಗೆ ಸಿಗಲಿದೆ ಹೆಚ್ಚು ಲಾಭ…? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

20 ಲಕ್ಷ ಕೋಟಿ ರೂ. ಪ್ಯಾಕೇಜ್ ನಲ್ಲಿ ಯಾರಿಗೆ ಸಿಗಲಿದೆ ಹೆಚ್ಚು ಲಾಭ…?

ದೇಶದ ಜಿಡಿಪಿ ಶೇಕಡಾ 10 ರಷ್ಟಿದ್ದು ದೇಶಾದ್ಯಂತ ವಿವಿಧ ಕ್ಷೇತ್ರಗಳಿಗೆ ಜೀವ ತುಂಬಲು ಪ್ರಧಾನಿ ನರೇಂದ್ರ ಮೋದಿ ಅವರು 20 ಲಕ್ಷ ಕೋಟಿ ರೂಪಾಯಿಗಳ ಪರಿಹಾರ ಪ್ಯಾಕೇಜ್ ಘೋಷಿಸಿದ್ದಾರೆ.

ಯಾವ ಸೆಕ್ಟರ್ ಗೆ ಎಷ್ಟು ಎಂಬುದನ್ನು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಇಂದು ಹೇಳಲಿದ್ದಾರೆ. ಇದಕ್ಕೂ ಮುನ್ನ  ಯಾವ ಸೆಕ್ಟರ್ ಗೆ ಎಷ್ಟು ಪ್ಯಾಕೇಜ್ ಸಿಗಬಹುದು ಎಂಬ ಬಗ್ಗೆ ಚರ್ಚೆ ನಡೆಯುತ್ತಿದೆ. ಅಂತರರಾಷ್ಟ್ರೀಯ ರೇಟಿಂಗ್ ಏಜೆನ್ಸಿಗಳು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿವೆ.

ಈ ಪ್ಯಾಕೇಜ್ ದೊಡ್ಡ ಮಟ್ಟದಲ್ಲಿದ್ದು ಎಂಎಸ್‌ಎಂಇ ಮತ್ತು ಕೃಷಿ ವಲಯಕ್ಕೆ ಹೆಚ್ಚು ಬೆಂಬಲ ಸಿಗುವ ಸಾಧ್ಯತೆಯಿದೆ. ಎಸ್‌ಎಂಇಗಳಿಗೆ ತೆರಿಗೆಯಲ್ಲಿ ವಿನಾಯಿತಿ ಸಿಗುವ ಸಾಧ್ಯತೆಯಿದೆ. ಉತ್ಪಾದನೆ ಮತ್ತು ಹೂಡಿಕೆಯನ್ನು ಹೆಚ್ಚಿಸಲು ಇದ್ರಿಂದ ಸಹಾಯವಾಗಲಿದೆ ಎಂದು ಜೆಫರೀಸ್ ತನ್ನ ವರದಿಯಲ್ಲಿ ಹೇಳಿದೆ.

ಅಮೆರಿಕದ ದೊಡ್ಡ ರೇಟಿಂಗ್ ಸಂಸ್ಥೆ ಜೆಪಿ ಮೋರ್ಗಾನ್ ಈ ಪ್ಯಾಕೇಜ್ ನಿರೀಕ್ಷೆಗಿಂತ ದೊಡ್ಡದಾಗಿದೆ ಎಂದು ಹೇಳಿದೆ. ಭೂಮಿ, ಕಾರ್ಮಿಕ, ಲಿಕ್ವಿಡಿಟಿ ಮತ್ತು ಕಾನೂನಿನ ಮೇಲೆ ಗಮನ ಹರಿಸಿದೆ.

ಹೂಡಿಕೆ ಹೆಚ್ಚಿಸಲು ಸರ್ಕಾರ ಒತ್ತು ನೀಡುತ್ತಿದ್ದು, ಭೂಮಿ ಮತ್ತು ಕಾರ್ಮಿಕ ಸುಧಾರಣೆಗಳ ಹೆಚ್ಚಿನ ಪ್ಯಾಕೇಜ್ ನೀಡಬಹುದು ಎಂದು ಗೋಲ್ಡ್ಮನ್ ಸ್ಯಾಚ್ಸ್ ಹೇಳಿದೆ.

ಪಿಎಂ ಕಿಸಾನ್ ಸಮ್ಮನ್ ಯೋಜನೆ ವಿಸ್ತರಣೆ ಕುರಿತು ಸರ್ಕಾರ ತೀರ್ಮಾನಿಸಬಹುದು ಎಂದು ತಜ್ಞರು ಹೇಳುತ್ತಿದ್ದಾರೆ. ಕಾಟೇಜ್ ಉದ್ಯಮ, ಗೃಹ ಉದ್ಯಮ, ಸಣ್ಣ ಉದ್ಯಮಕ್ಕೆ ಹೆಚ್ಚು ಒತ್ತು ನೀಡುವ ಸಾಧ್ಯತೆಯಿದೆ. ಉದ್ಯೋಗ, ವೃತ್ತಿ ಕ್ಷೇತ್ರಕ್ಕೂ ಹೆಚ್ಚಿನ ಕೊಡುಗೆ ಸಿಗುವ ಸಾಧ್ಯತೆಯಿದೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...