ನವದೆಹಲಿ: ರೈಲ್ವೆ ಉದ್ಯೋಗಿಗಳಿಗೆ 78 ದಿನಗಳ ಬೋನಸ್ ನೀಡಲು ರೈಲ್ವೆ ಇಲಾಖೆ ಮುಂದಾಗಿದೆ. ರೈಲ್ವೆ ನೌಕರರಿಗೆ ಗರಿಷ್ಠ 17,951 ರೂ. ಬೋನಸ್ ನೀಡುವುದಾಗಿ ಘೋಷಣೆ ಮಾಡಲಾಗಿದೆ.
ತಿಂಗಳಿಗೆ 7 ಸಾವಿರ ರೂಪಾಯಿಯಂತೆ 78 ದಿನಗಳಿಗೆ 17,951 ರೂಪಾಯಿ ಬೋನಸ್ ನೀಡಲಾಗುವುದು. ಗೆಜೆಟೆಡ್ ಅಲ್ಲದ 11:58 ಲಕ್ಷ ಉದ್ಯೋಗಿಗಳಿಗೆ 2019 -20 ನೇ ಸಾಲಿನಲ್ಲಿ 78 ದಿನಗಳಿಗೆ ಸಮನಾದ ಉತ್ಪಾದನೆ ಆಧಾರಿತ ಬೋನಸ್ ನೀಡಲಾಗುತ್ತದೆ. ಇದರಿಂದ ರೈಲ್ವೆ ಇಲಾಖೆಗೆ 2081.68 ಕೋಟಿ ರೂಪಾಯಿ ಹೆಚ್ಚುವರಿ ಹೊರೆಯಾಗಬಹುದು ಎಂದು ಅಂದಾಜಿಸಲಾಗಿದೆ.