alex Certify 1.13 ಕೋಟಿ ಸರ್ಕಾರಿ ನೌಕರರಿಗೆ ಶಾಕ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

1.13 ಕೋಟಿ ಸರ್ಕಾರಿ ನೌಕರರಿಗೆ ಶಾಕ್

ಕೊರೊನಾ ಲಾಕ್ ಡೌನ್ ಮಧ್ಯೆ ಸರ್ಕಾರಿ ನೌಕರರಿಗೆ ಶಾಕಿಂಗ್ ನ್ಯೂಸ್ ಸಿಕ್ಕಿದೆ.ಉದ್ಯೋಗಿಗಳು ಹಾಗೂ ಪಿಂಚಣಿದಾರರಿಗೆ ಡಿಎ ಹೆಚ್ಚಿಸುವ ನಿರ್ಧಾರದಿಂದ ಕೇಂದ್ರ ಸರ್ಕಾರ ಹಿಂದೆ ಸರಿದಿದೆ. ಜನವರಿಯಿಂದ ಡಿಸೆಂಬರ್ 2020ರವರೆಗೆ ಏರಿಕೆಯಾದ ಡಿಎ ನೀಡದಂತೆ ತೀರ್ಮಾನ ಕೈಗೊಳ್ಳಲಾಗಿದೆ.

ಸರ್ಕಾರದ ಈ ನಿರ್ಧಾರದಿಂದ 54 ಲಕ್ಷ ಸರ್ಕಾರಿ ನೌಕರರು ಮತ್ತು 65 ಲಕ್ಷ ಪಿಂಚಣಿದಾರರ ಮೇಲೆ ಪರಿಣಾಮ ಬೀರಲಿದೆ. ಕಳೆದ  ತಿಂಗಳು ಸರ್ಕಾರ ಕೇಂದ್ರ ಉದ್ಯೋಗಿಗಳಿಗೆ ಶೇಕಡಾ 4ರಷ್ಟು ಡಿಎ  ಹೆಚ್ಚಳ ಘೋಷಿಸಿತ್ತು. ಡಿಎಯನ್ನು ಶೇಕಡಾ 17ರಿಂದ ಶೇಕಡಾ 21 ಕ್ಕೆ ಹೆಚ್ಚಿಸಲಾಗಿತ್ತು.

ಕೊರೊನಾ ವೈರಸ್ ಸೋಂಕಿನಿಂದಾಗಿ ಸರ್ಕಾರ ಈ ನಿರ್ಧಾರ ಕೈಗೊಂಡಿದೆ. ಇದ್ರಿಂದ ಸರ್ಕಾರಿ ನೌಕರರ ಆದಾಯದ ಮೇಲೆ ಪರಿಣಾಮ ಬೀರಲಿದೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...