alex Certify 1 ಲಕ್ಷ ಉದ್ಯೋಗಿಗಳ ನೇಮಕಕ್ಕೆ ಮುಂದಾದ ಅಮೆಜಾನ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

1 ಲಕ್ಷ ಉದ್ಯೋಗಿಗಳ ನೇಮಕಕ್ಕೆ ಮುಂದಾದ ಅಮೆಜಾನ್

ಕೊರೊನಾ ಸಮಯದಲ್ಲಿ  ಜನರಲ್ಲಿ ಆನ್‌ಲೈನ್ ಶಾಪಿಂಗ್ ಹುಚ್ಚು ಹೆಚ್ಚಾಗಿದೆ. ಹೆಚ್ಚುತ್ತಿರುವ ಈ ಬೇಡಿಕೆಯನ್ನು ಪೂರೈಸಲು, ವಿಶ್ವದ ಅತಿದೊಡ್ಡ ಇ-ಕಾಮರ್ಸ್ ಕಂಪನಿಯಾದ ಅಮೆಜಾನ್ 100,000 ಜನರನ್ನು ನೇಮಿಸಿಕೊಳ್ಳಲು ಮುಂದಾಗಿದೆ.

ಪ್ಯಾಕಿಂಗ್, ಸಾಗಣೆ ಅಥವಾ ವಿಂಗಡಿಸಲು ಹೊಸ ಉದ್ಯೋಗಿಗಳು ಸಹಾಯ ಮಾಡುತ್ತಾರೆ ಎಂದು ಕಂಪನಿ ಹೇಳಿದೆ. ಅರೆಕಾಲಿಕ ಮತ್ತು ಪೂರ್ಣ ಸಮಯದ ಕೆಲಸ ನೀಡಲಾಗುವುದು. ಈ ಉದ್ಯೋಗ ರಜಾ ದಿನದ ನೇಮಕವಲ್ಲವೆಂದು ಕಂಪನಿ ಹೇಳಿದೆ.

ಅಮೆಜಾನ್ ಪ್ರಧಾನ ಕಚೇರಿ ಅಮೆರಿಕದಲ್ಲಿದೆ. ಕೊರೊನಾ ಸಂಕಟದಲ್ಲಿ ಅಮೆಜಾನ್ ವ್ಯಾಪಾರವನ್ನು ದ್ವಿಗುಣಗೊಳಿಸಿದೆ. ಏಪ್ರಿಲ್-ಜೂನ್ ತ್ರೈಮಾಸಿಕದಲ್ಲಿ ಕೊರೊನಾ ಕಂಪನಿ ಮೇಲೆ ಯಾವುದೇ ಪರಿಣಾಮ ಬೀರಿಲ್ಲ. ಅಮೆಜಾನ್ ದಾಖಲೆಯ ಲಾಭ ಗಳಿಸಿದೆ. ಕೊರೊನಾದಿಂದ  ಜನರಲ್ಲಿ ಆನ್‌ಲೈನ್ ಶಾಪಿಂಗ್ ಪ್ರವೃತ್ತಿ ಹೆಚ್ಚಾಗಿದೆ. ಇದ್ರ ಪ್ರಯೋಜನವನ್ನು ಅಮೆಜಾನ್ ಪಡೆದಿದೆ.

ಈ ಹಿಂದೆ 175,000 ಜನರನ್ನು ನೇಮಕ ಮಾಡಿಕೊಳ್ಳುವುದಾಗಿ ಕಂಪನಿ ಹೇಳಿತ್ತು. ಕಳೆದ ವಾರ, ಕಂಪನಿಯು 33,000 ಕಾರ್ಪೊರೇಟ್ ಮತ್ತು ಟೆಕ್ ಉದ್ಯೋಗಗಳ ನೇಮಕಕ್ಕೆ ಸೂಚನೆ ನೀಡಿದೆ. ಕಳೆದ ವರ್ಷ ಕಂಪನಿಯು ರಜಾ ದಿನಗಳಿಗೆ ಮುಂಚಿತವಾಗಿ 200,000 ಜನರನ್ನು ನೇಮಕ ಮಾಡಿತ್ತು.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...