ಕೊರೊನಾ ಸಮಯದಲ್ಲಿ ಜನರಲ್ಲಿ ಆನ್ಲೈನ್ ಶಾಪಿಂಗ್ ಹುಚ್ಚು ಹೆಚ್ಚಾಗಿದೆ. ಹೆಚ್ಚುತ್ತಿರುವ ಈ ಬೇಡಿಕೆಯನ್ನು ಪೂರೈಸಲು, ವಿಶ್ವದ ಅತಿದೊಡ್ಡ ಇ-ಕಾಮರ್ಸ್ ಕಂಪನಿಯಾದ ಅಮೆಜಾನ್ 100,000 ಜನರನ್ನು ನೇಮಿಸಿಕೊಳ್ಳಲು ಮುಂದಾಗಿದೆ.
ಪ್ಯಾಕಿಂಗ್, ಸಾಗಣೆ ಅಥವಾ ವಿಂಗಡಿಸಲು ಹೊಸ ಉದ್ಯೋಗಿಗಳು ಸಹಾಯ ಮಾಡುತ್ತಾರೆ ಎಂದು ಕಂಪನಿ ಹೇಳಿದೆ. ಅರೆಕಾಲಿಕ ಮತ್ತು ಪೂರ್ಣ ಸಮಯದ ಕೆಲಸ ನೀಡಲಾಗುವುದು. ಈ ಉದ್ಯೋಗ ರಜಾ ದಿನದ ನೇಮಕವಲ್ಲವೆಂದು ಕಂಪನಿ ಹೇಳಿದೆ.
ಅಮೆಜಾನ್ ಪ್ರಧಾನ ಕಚೇರಿ ಅಮೆರಿಕದಲ್ಲಿದೆ. ಕೊರೊನಾ ಸಂಕಟದಲ್ಲಿ ಅಮೆಜಾನ್ ವ್ಯಾಪಾರವನ್ನು ದ್ವಿಗುಣಗೊಳಿಸಿದೆ. ಏಪ್ರಿಲ್-ಜೂನ್ ತ್ರೈಮಾಸಿಕದಲ್ಲಿ ಕೊರೊನಾ ಕಂಪನಿ ಮೇಲೆ ಯಾವುದೇ ಪರಿಣಾಮ ಬೀರಿಲ್ಲ. ಅಮೆಜಾನ್ ದಾಖಲೆಯ ಲಾಭ ಗಳಿಸಿದೆ. ಕೊರೊನಾದಿಂದ ಜನರಲ್ಲಿ ಆನ್ಲೈನ್ ಶಾಪಿಂಗ್ ಪ್ರವೃತ್ತಿ ಹೆಚ್ಚಾಗಿದೆ. ಇದ್ರ ಪ್ರಯೋಜನವನ್ನು ಅಮೆಜಾನ್ ಪಡೆದಿದೆ.
ಈ ಹಿಂದೆ 175,000 ಜನರನ್ನು ನೇಮಕ ಮಾಡಿಕೊಳ್ಳುವುದಾಗಿ ಕಂಪನಿ ಹೇಳಿತ್ತು. ಕಳೆದ ವಾರ, ಕಂಪನಿಯು 33,000 ಕಾರ್ಪೊರೇಟ್ ಮತ್ತು ಟೆಕ್ ಉದ್ಯೋಗಗಳ ನೇಮಕಕ್ಕೆ ಸೂಚನೆ ನೀಡಿದೆ. ಕಳೆದ ವರ್ಷ ಕಂಪನಿಯು ರಜಾ ದಿನಗಳಿಗೆ ಮುಂಚಿತವಾಗಿ 200,000 ಜನರನ್ನು ನೇಮಕ ಮಾಡಿತ್ತು.